ಛಂದೋಪನಿಷತ್ತಿನ ಕಥೆ ‘ ಸತ್ಯಕಾಮ ಜಾಬಾಲ’ ವಿಷಯ ವಸ್ತುವಿರುವ ತ.ರಾ.,ಸು ಅವರು ಬರೆದ ಕಾದಂಬರಿ-‘ನಾಲ್ಕುxನಾಲ್ಲು=ಒಂದು’. 1979ರಲ್ಲಿ ಮೊದಲ ಮುದ್ರಣ ಹಾಗೂ ಪ್ರಸ್ತುತ ಕೃತಿಯು 5ನೇ ಮುದ್ರಣವಾಗಿದೆ. ಹುಟ್ಟಿಗಿಂತ ಸತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಸತ್ಯಕಾಮ ಜಾಬಾಲ ಕಥೆ ಕಾಡಿದ ಪರಿಣಾಮ ಕಾದಂಬರಿ ರೂಪುಗೊಂಡಿದೆ ಎಂದು ಸ್ವತಃ ಲೇಖಕರೇ ಹೇಳುತ್ತಾರೆ.
ಅಜ್ಞಾತ ಕುಲಗೋತ್ರದ ಬಾಲಕನೊಬ್ಬನ ಜಾತಿ ಕುರಿತ ಸತ್ಯದ ಅನಾವರಣದಿಂದಾಗಿ ಮುಂದೆ ಬ್ರಹ್ಮಜ್ಞಾನಿಯೂ ಆಗುತ್ತಾನೆ. ಇಂತಹ ಗುಣಗಳಿಗೆ ಶ್ರದ್ಧೆ, ತಪಸ್ಸು, ಅಧ್ಯಯನ ಇತ್ಯಾದಿಗಳ ಹಿನ್ನೆಲೆ ಇರುತ್ತದೆ. ವಂಶಗತವಾಗಿ ಬಂದಿರುವುದಿಲ್ಲ. ಆದರೆ, ಇದನ್ನು ಎಷ್ಟು ಜನ ಒಪ್ಪುತ್ತಾರೆ? ಎನ್ನುವ ಜಿಜ್ಞಾಸೆಯೇ ಕಾದಂಬರಿಯ ವಸ್ತು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE