‘ಮಹಾವೃಕ್ಷ’ ಕೃತಿಯು ಬಿ.ಆರ್. ಪೋಲೀಸ್ ಪಾಟೀಲ್ ಅವರು ಬರೆದ ನಾಗನೂರು ಶಿವಬಸವ ಸ್ವಾಮಿಗಳ ಜೀವನಾಧಾರಿತ ಕಾದಂಬರಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಶಶಿಧರ ತೋಡಕರ್ ಅವರು, ‘ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಸರ್ಕಾರದ ಪಾಲು ಕಾಲು. ಆದರೆ, ಲಿಂಗಾಯತ ಮಠಗಳ ಪಾಲು ಮುಕ್ಕಾಲು ಎಂದೇ ಹೇಳಬೇಕು, ನಾಗನೂರು ಕರ್ನಾಟಕದ ನಕ್ಷೆಯಲ್ಲಿ ಒಂದು ಪುಟ್ಟ ಊರು, ಆದರೆ ಇಂದು ಧರ್ಮಶ್ರದ್ಧೆ, ಶೈಕ್ಷಣಿಕ ಪ್ರಗತಿ, ಸಾಂಸ್ಕೃತಿಕ ಪಾರಮ್ಯಗಳಿಗೆ ಅದು ಹೆಸರಾಗಿದೆ. ಇದರ ಹಿಂದೆ, ಮಹಾಪ್ರಸಾದಿ, ಕಾಯಕಜೀವಿ, ಭಾವೈಕ್ಯಬಂಧು ಪರಮ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳ ತಪಸ್ಸು ಹಾಗೂ ದಾಸೋಹದ ಭಾವಬಲವಿದೆ. ಪುಟ್ಟ ಹಳ್ಳಿಯಿಂದ ಗಡಿನಾಡು ಬೆಳಗಾವಿಗೆ ಬಂದು ಏಳು-ಬೀಳುಗಳನ್ನು ಲೆಕ್ಕಿಸದೆ ಗಟ್ಟಿಯಾಗಿ ನಿಂತು, ಬಡಮಕ್ಕಳ ಭವಿಷ್ಯವನ್ನು ಬದಲಾಯಿಸಿದ ಪೂಜ್ಯರು ಪ್ರಾತಃಸ್ಮರಣೀಯರು. ಕಲಿತದ್ದು ಕಡಿಮೆಯಾದರೂ ಅರಿತು ಬಾಳಿದ, ಹಾನಗಲ್ಲ ಕುಮಾರಸ್ವಾಮಿಗಳ ಕರಕಮಲ ಸಂಜಾತರಾದ ಶಿವಬಸವ ಸ್ವಾಮಿಗಳು ಶ್ರದ್ಧಾ-ಭಕ್ತಿಯಿಂದ ಗುರು ತೋರಿದ ದಾರಿಯಲ್ಲಿ ನಡೆದು ದಾಸೋಹದ ಮೇರುವಾದರಲ್ಲದೆ, ಆಸರೆಯ ಮಹಾವೃಕ್ಷವೂ ಆದರು. ಬೆಳಗಾವಿಯಲ್ಲಿ ಕೆ. ಎಲ್. ಇ. ಸಂಸ್ಥೆ ಸ್ಥಾಪನೆಯಾಗದೆ ಹೋಗಿದ್ದರೆ, ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯಲ್ಲಿ ಉಚಿತ ಪ್ರಸಾದನಿಲಯ ತೆರೆಯದೆ ಹೋಗಿದ್ದರೆ ಕರ್ನಾಟಕ ಮೂಗು ಮುರಿದುಕೊಂಡ ಮುಖವಾಗುತ್ತಿತ್ತು. ಇಂಥ ಪೂಜ್ಯರ ಸ್ಮರಣಾರ್ಥವಾದ ಬದುಕನ್ನು 'ಮಹಾವೃಕ್ಷ' ಎಂದು ಕರೆದು ಕಾದಂಬರಿ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಕನ್ನಡದ ಹೆಸರಾಂತ ನಾಟಕಕಾರ, ಕತೆ, ಕಾದಂಬರಿಕಾರ, ಲಾವಣಿ- ತತ್ತ್ವಪದಕಾರ, ನಟ, ನಿರ್ದೇಶಕ, ಗಾಯಕ ಪ್ರೊ. ಬಿ. ಪೊಲೀಸ್ ಪಾಟೀಲರು, ಅಭಿನಂದನಾರ್ಹರು. ಎಲ್ಲರೂ ಓದಲೇಬೇಕಾದ ಅಪರೂಪದ ಕಾದಂಬರಿ ಮಹಾವೃಕ್ಷ’ ಎಂದಿದ್ದಾರೆ.
ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...
READ MORE