`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ. ‘ಕುರುದ್ವೀಪ’ದಲ್ಲಿ ಕೇವಲ ಜನರ ಬದುಕು ಮಾತ್ರ ‘ದ್ವೀಪ’ವಾಗುವುದಿಲ್ಲ; ಪ್ರಕೃತಿ ಕೂಡ ಅಂತಹ ಒಂದು ಆತಂಕಕಾರೀ ದ್ವೀಪವೊಂದನ್ನು ಸೃಷ್ಟಿಸಿ ಮಾನವನ ಇಚ್ಛಾಶಕ್ತಿಯ ಪರಮೋಚ್ಛ ಬಳಕೆಯ ಬಗ್ಗೆ ಕರೆಕೊಟ್ಟು ಅದರಿಂದ ಹೊರಬರುವ ಮಾರ್ಗವನ್ನು ಅವರೇ ಸೃಷ್ಟಿಸಿಕೊಳ್ಳುವಂತೆ ಮಾಡುವಲ್ಲಿ ತಾನು ಸೂತ್ರಧಾರಿಯಾಗಿ ಆಟವಾಡುತ್ತಾ ಸಾಗುತ್ತದೆ. ಈಗಲೂ ಮುಳುಗುವ ಆತಂಕವನ್ನು ಹೊತ್ತು ನಿಂತ ಜನರ, ಅಂದರೆ ಕುಂದಾಪುರದ ಸಮೀಪದಲ್ಲಿರುವ ‘ಕುರುದ್ವೀಪ’ದ ಜನರ ಕಥೆಯಿದು. ಇಲ್ಲಿಯ ಜನರ ನಿತ್ಯ ಬವಣೆಯನ್ನು ಚಿತ್ರಿಸಿ ಅದರ ಬಗ್ಗೆ ಗಮನ ನೀಡುವಂತೆ ಅವರನ್ನೂ ಅವರ ಬದುಕನ್ನೂ ಜೊತೆಗೆ ಕುರುದ್ವೀಪವನ್ನೂ ರಕ್ಷಿಸಿಕೊಳ್ಳುಚ ಹಂಬಲವನ್ನು ಇದರಲ್ಲಿ ಲೇಖಕಿ ವ್ಯಕ್ತಪಡಿಸುತ್ತಾರೆ
ವೀಣಾ ರಾವ್ ಅವರು ಕುಂದಾಪುರ ತಾಲೂಕಿನ ಕಂಬದ ಕೋಣೆ ಗ್ರಾಮದವರು. ಬಿ.ಎ ಪದವಿಧರೇ. 2020ರಲ್ಲಿ ಕೊಡಗು ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆಯ ಅಧ್ಯಕ್ಷರಾಗಿದ್ದರು. ಕವನ, ಚುಟುಕು, ಸಣ್ಣಕಥೆ, ಕಾದಂಬರಿ ಪ್ರಕಾರದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಭಾವ ಸರಿತೆ(ಕವನ ಸಂಕಲನ), ಮಣ್ಣಿನ ಗೋಡೆ(ಕಥಾಸಂಕಲನ), ಮಧುರ ಮುರಳಿ(ಕಾದಂಬರಿ), ಕುರುದ್ವೀಪ(ಕಾದಂಬರಿ) ಪ್ರಶಸ್ತಿಗಳು: ‘ಮಧುರ ಮುರಳಿ’ ಕಾದಂಬರಿಗೆ 2024ರ ‘ಬಸವ ಪುರಸ್ಕಾರ’ ಮತ್ತು ‘ದಿ. ಮಹದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ ಪ್ರಶಸ್ತಿ ...
READ MORE