ಸತ್ಕುಲಪ್ರಸೂತರು

Author : ಗುರುಪ್ರಸಾದ ಕಾಗಿನೆಲೆ

Pages 256

₹ 295.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಸತ್ಕುಲಪ್ರಸೂತರು’ ಗುರುಪ್ರಸಾದ ಕಾಗಿನೆಲೆ ಅವರ ಕಾದಂಬರಿಯಾಗಿದೆ. ಇದಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಅವರ ಬೆನ್ನುಡಿ ಬರಹವಿದೆ; ಹಲವು ಪದರಗಳಿರುವ ನಿರೂಪಣೆ, ಹಲವು ಕೋನಗಳಿಂದ ನಡೆಯುವ ನಿರೂಪಣೆ ಇರುವ ಕನ್ನಡ ಕಾದಂಬರಿ ಓದಿ ಬಹಳ ಬಹಳ ವರ್ಷಗಳೇ ಕಳೆದಿವೆ. ಒಂದು ಮಾತಲ್ಲಿ ಹೇಳಬೇಕು ಅಂದರೆ ಇದು ನಾವು ಬದುಕುತ್ತಿರುವ ಈ 2024ರ ಬದುಕಿಗೆ ನನ್ನ ತಲೆಮಾರಿನವರೊಬ್ಬರು ಅಮೆರಿಕದಲ್ಲಿ ಕೂತು ಹಿಡಿದಿರುವ ಕನ್ನಡಿ. ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಬದಲಾಗದ ಸಮಸ್ಯೆಯನ್ನು 'ಸತ್ಕುಲಪ್ರಸೂತರು' ಪರಿಶೀಲಿಸಿದೆ. ಕಾದಂಬರಿಯೊಂದು ಕಥೆಯ ಕಾಲವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯ ಸಂಗತಿಯಾಗುತ್ತದೆ. ಈ ಕಾದಂಬರಿಯು ನವೋದಯ, ನವ್ಯಗಳ ಮಾರ್ಗವನ್ನು ಬಿಟ್ಟು ಕಾಲವನ್ನು ಕೌದಿಯ ಹಾಗೆ ಹೆಣೆದಿದೆ. ಇದು ಆತ್ಮಕಥೆಯೋ, ಸಮುದಾಯವೊಂದರ ಆಚರಣೆಗಳ ದಾಖಲೆಯೋ, ಹುಟ್ಟಿದ ನೆಲ ಮತ್ತು ಸಾಕಿದ ಕುಟುಂಬ, ನಂಟಸ್ತನ, ಪರಿಚಿತ ಉದ್ಯೋಗಗಳಿಲ್ಲದರಿಂದ ದೂರವಾಗಿ ಬದುಕುವ ಜನಸಮೂಹದ ಸ್ವವಿಮರ್ಶೆಯೋ, ಬರೆಯಲಿರುವ ಕಾದಂಬರಿಯೊಂದರ ಟಿಪ್ಪಣಿಯೋ, ಇದೇ ಕಾದಂಬರಿಯೋ, ಇಲ್ಲಿರುವಂಥ ನಿರೂಪಣೆ ಕಾದಂಬರಿಯ ನಿರೂಪಕನ ಅಗತ್ಯ ಮತ್ತು ಕಾದಂಬರಿಯ ಪಾತ್ರವೊಂದರ ಒತ್ತಾಯದಿಂದ ರೂಪುಗೊಂಡದ್ದೋ ಎಂದು 'ಸತ್ಕುಲಪ್ರಸೂತ'ರನ್ನು ಹಲವು ಕೋನಗಳಿಂದ ನೋಡಲು ಸಾಧ್ಯವಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...

READ MORE

Related Books