ಪುರುಷಪ್ರದನ ಸಮಾಜದಲ್ಲಿ ಮಹಿಳೆ ಅನುಭವಿಸುವ ಅಸಮಾನತೆ,ಅನ್ಯಯ,ದೌರ್ಜನ್ಯಗಳನ್ನು ಈ ಕಾದಂಭರಿಯಲ್ಲಿ ವಿವರಿಸಲಾಗಿದೆ .ಯಾವುದೋ ವಿಷ ಗಳಿಗೆಯಲ್ಲಿ ವಿಧಿಯ ಸಂಚಿಗೆ ಬಲಿಯಾಗಿ ಪಾತಾಳಕ್ಕೆ ಬಿದ್ದು ನಂತರ ಊರ್ವಶಿ ಪಶ್ಚಾತ್ತಾಪ, ತ್ಯಾಗ, ಸೇವೆಗಳಿಂದ ತನ್ನನ್ನು ತಾನು ಉದ್ದರಿಸಿಕೊಂಡ ಹೆಣ್ಣಿನ ಆದ್ರ್ರ ಕತೆ ಇದು.ಕಥಾನಾಯಕಿ ಸೀತಾಲಕ್ಷ್ಮಿಯ ಸತೀತ್ತವನ್ನು ಭಂಗ ಪಡಿಸಿದ ನರಸಿಂಹನಿಗೆ ಅಂದಿನ ಸಮಾಜ ಏನೂ ಶಿಕ್ಷೆ ವಿಧಿಸುವುದಿಲ್ಲ.ಅವನು ಏನು ಬೇಕಾದರೂ ಮಾಡಬಹುದು ಎಂಬ ಅಂದಿನ ಪುರುಷ ಪ್ರಧಾನ ಸಮಾಜ, ಕೆಂಡದಂತಹ ಸಮಾಜದಲ್ಲಿ ಇದ್ದುಕೊಂಡು ಕಷ್ಟ ನಿಷ್ಠುರಗಳಿಗೆ ಬಲಿಯಾಗಿ,ನೆರೆಹೊರೆಯವರು ವಾಗ್ದಾಣಗಳಿಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಾಳೆ. ಸೀತಾಲಕ್ಷ್ಮಿಯ ಮನಸ್ಸಿಗೆ ಅವಳ ಸಂಗೀತದ ಗುರುಗಳಾದ ಕಮಲಾಬಾಯಿ, ಅಣ್ಣ ಶ್ರೀನಿವಾಸ ಹಾಗೂ ತಂದೆಯಂತಿದ್ದ ಪ್ರಾಣೇಶಾಚಾರ್ಯರು ತೋರುವ ಸಾಂತ್ವನ ಅದೆಷ್ಟು ಮುಖ್ಯವಾಗಿರುತ್ತದೆ ಎಂಬುದನ್ನು ಈ ಕಥೆ ವಿವರಿಸಲಾಗಿದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE