ಸಂದೇಹ ಸುಂದರಿ-ಎನ್. ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿ. ಕಾಗದ ಬರೆದು ಬರೆದು ಹಣ ತರಿಸಿಕೊಳ್ಳುತ್ತಿದ್ದ ವ್ಯಕ್ತಿಯ ವಂಚನೆಯ ಜಾಲವನ್ನು ಪತ್ತೇದಾರಿ ಪುರುಷೋತ್ತಮನು ಪತ್ತೆ ಮಾಡಿದ್ದು ಹೇಗೆ ಎಂಬುದು ಇಲ್ಲಿಯ ಕಥಾ ವಸ್ತು. ಕಾದಂಬರಿಕಾರರ ಕುತೂಹಲಕಾರಿ ಹಾಗೂ ಪರಿಣಾಮಕಾರಿ ಬರವಣಿಗೆಯ ಶೈಲಿ ಓದುಗರ ಗಮನ ಸೆಳೆಯುತ್ತದೆ.
ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ...
READ MORE