ಲೇಖಕಿ ಎ.ಪಿ. ಮಾಲತಿ ಅವರು ಬರೆದ ಸಾಮಾಜಿಕ ಕಾದಂಬರಿ-ಮಂದಾರ. ಪ್ರೇಮ ವಿವಾಹಗಳು ಜೀವನ ನಡೆಸಿಕೊಂಡು ಹೋಗುವಲ್ಲಿ ವಿಫಲವಾಗುವುದಿಲ್ಲ. ಹಿರಿಯರು ನೋಡಿ ಮಾಡಿದ ಮದುವೆಗಳಿಗಿಂತ ತುಂಬಾ ಅರ್ಥವತ್ತಾಗಿ ಸಂಸಾರ ಸಾಗಿಸುವ ಸಾಮರ್ಥ್ಥವನ್ನು ಪ್ರೇಮ ವಿವಾಹಿತರು ಮೆರೆಯುತ್ತಾರೆ. ಒಂದು ವೇಳೆ ಪ್ರೇಮ ವಿವಾಹ ಎಂದು ಊರು ಬಿಟ್ಟು ಹೋಗಿ, ಸಂಸಾರ ನಡೆಸದೇ ಕಷ್ಟವಾದಾಗ ಗಂಡು ಹೇಗೋ ಪಾರಾಗುತ್ತಾನೆ. ಆದರೆ, ಹೆಣ್ಣು ತೀವ್ರ ಸಂಕಷ್ಟದಲ್ಲಿ ಬಳಲಬೇಕಾಗುತ್ತದೆ. ಹೆಣ್ಣು ಸತಿ ಸಾವಿತ್ರಿಯಂತಿರಬೇಕು ಎಂದು ಹೇಳುವ ಪುರುಷರು ತಾವು ರಾಮನಂತಿರುತ್ತಾರೆಯೇ? ಎಂದು ಕಾದಂಬರಿಯ ನಾಯಕಿ ಪ್ರಶ್ನಿಸುತ್ತಾಳೆ. ಇದು ಕಾದಂಬರಿಯ ವಸ್ತು. 1985ರಲ್ಲಿ ವನಿತಾ ಮಾಸ ಪತ್ರಿಕೆಯು ದೀಪಾವಳಿ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿತ್ತು.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE