ಲೇಖಕಿ ಗೀತಾ ಬಿ.ಯು ಅವರ ಕಾದಂಬರಿ ‘ತಮಸೋಮ ಜ್ಯೋತಿರ್ಗಮಯ’ , ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಲೇಖಕಿ ಗೀತಾ ಬಿ.ಯು ಅವರ ಬರಹದಲ್ಲಿ ಕೆಚ್ಚಿದೆ. ಕರುಣೆ ಇದೆ. ಅದರಲ್ಲಿ ಬರುವ ಜೀವನದ ವಾಸ್ತವಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎನ್ನುತ್ತಾರೆ ಲೇಖಕ ಹಾಗೂ ಪತ್ರಕರ್ತ ಹೆಚ್.ವೈ. ಶಾರದಾ ಪ್ರಸಾದ್ . ’ನಿಮ್ಮ ಕಥೆಗಳಲ್ಲಿ ಬರುವ ವ್ಯಕ್ತಿಗಳು ಕಾಗದದ ವ್ಯಕ್ತಿಗಳಲ್ಲದೆ ನಿಜವಾಗಿ ಉಸಿರಾಡುವ ಜನರಂತೆ ತೋರುತ್ತಾರ”. ಎಂದು ಪ್ರಶಂಸಿಸಿದ್ದಾರೆ.
ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’ ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...
READ MORE