ಲಕ್ಷ್ಮಣ ಬಾದಾಮಿ ಅವರ ಮೊದಲ ಕಥಾ ಸಂಕಲನ-ಭವ. 10 ಕಥೆಗಳನ್ನು ಒಳಗೊಂಡಿದೆ. ಕಥೆಯ ನಿರೂಪಣೆ, ಭಾಷೆಯ ಬಳಕೆ, ಶೈಲಿ ಇಲ್ಲಿಯ ಕಥೆಗಳ ಪ್ರಮುಖ ಅಂಶಗಳಾಗಿದ್ದು, ಪ್ರತಿ ಕಥೆಯು ತುಂಬಾ ಲವಲವಿಕೆಯಿಂದ ಕೂಡಿದ್ದು, ಓದುಗರನ್ನು ಸೆಳೆಯುತ್ತದೆ. ಬದುಕನ್ನು ಬಹು ಸೂಕ್ಷ್ಮವಾಗಿ ಪರಿಶೀಲಿಸಿ ನೋಡುವ ಬಹುತೇಕ ಕಥನಗಳು, ತಮ್ಮ ವಸ್ತು ವೈವಿಧ್ಯತೆಯಿಂದ ವಿಶೆಷ್ಟವೆನಿಸುತ್ತವೆ. ಲೇಖಕರಿಗೆ ಕಥನ ಕಲೆ ಸಿದ್ಧಿಸಿದೆ.
ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ...
READ MORE