ಕರ್ನಾಟಕ ಮತಾರಾಷ್ಟ್ರ ರಾಜ್ಯಗಳ ಗಡಿ: ಪದೇಶವಾದ ಚಡಚಣದಲ್ಲಿ ಕನ್ನಡ ಕಟ್ಟುವ ಕೈಂಕರ್ಯಕ್ಕೆ ಗಂಡುಗಟ್ಟೆ ಹಾಕಿ ಸಿದ್ಧರಾಗಿ ನಿಂತಿರುವ ಯುವ ಬರಹಗಾರ, ಸಂಘಟಕ, ಶಿಕ್ಷಕ ಎಂ.ಕೆ.ಶೇಖ್ ಅವರದು. ಬಹುಮುಖ ವ್ಯಕ್ತಿತ್ವ, "ಭೂಮಾತೆ ನನ್ನ ಮಾತೆ' ಹಾಗೂ' ನನ್ನೂರಿಗೆ ಬೇಂದ್ರೆ ಹಾಗೂ ಇತರ ಕತೆಗಳು ಸಂಕಲನಗಳ ಮೂಲಕ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ನಾಡಿನ ಅನೇಕ ಹಿಂ ಕಿವಿಯ ಬರಹಗಾರ ಸಾಹಿತಿಗಳಿಗೆ ಚಡಚಣ ಸಾಹಿತ್ಯ ಚಟುವಟಿಕೆಗಳನ್ನು ಪರಿಚಯಿಸಿದ್ದಾರೆ. ಪ್ರಸ್ತುತ ಕೋರೋನಾ ಸೋಂಕು ರೋಗ ವ್ಯಾಧಿಗಿಂತ ಜಾತಿಯತೆಯ ವಿಷಮತೆಯು ಸಮಾಜಮುಖ ಬರಹಗಾರ, ಶೇಖ್ ರವರಿಗೆ ಚಿಂತನೆಗೀಡು ಮಾಡಿದಂತಿದೆ. ಜಾತಿಗಳ ಜಾಲದಿಂದ!" ಕಿರುಕಾದಂಬರಿ ಮಾವಳಿ ಎಂಬ ಕಲ್ಪಿತ ಗ್ರಾಮದ ಸುತ್ತ 18 ಜಾಲಗಳಲ್ಲಿ ಹೆಣೆದ ಪಾತ್ರಗಳಲ್ಲಿ ಶ್ರೀಪಾದ್ ಶೇಡಜಿ, ಶಾರದಮ್ಮ, ದಿವಾನಜಿ, ಚಲಪತಿ, ದಲಿತ ವಿಧವೆ ಕಾವೇರಿ, ಗಂಗಮ್ಮ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಅನೇಕ ಯುಗಪುರುಷರು ಆಗಿದ್ದನ್ನು ಅರಿತಿರುವ ಕಥಾನಾಯಕ ಚಲಪತಿ' ಹುಸಿ ಅಧ್ಯಾತ್ಮದ ಸೋಗು, ಸಾಮಾಜಿಕ ಅಸಮಾನತೆ, ಧಾರ್ಮಿಕ ಶೋಷಣೆ, ಸಂಸ್ಕೃತಿಕ ತಲ್ಲಣಗಳ ಕುರಿತು ಸಮಗ್ರ ಅಧ್ಯಯನ ಮಾಡಿದ ಬಿಸಿರಕ್ತದ ತರುಣ. ಸಮಸಮಾಜದ ಕನಸುಗಾರ ಕೂಡ. ಶೋಷಿತ ಸಮಾಜದ ಪರವಾಗಿ ನಿಂತು ಗಟ್ಟಿದ್ದನಿ ಎತ್ತಬಲ್ಲ ಗಟ್ಟಿಗೆ, ಒಂದುವರೆ ಸಾವಿರ ವರ್ಷಗಳ ಹಿಂದೆಯೇ ಕುಮಾರವ್ಯಾಸರು ಪರಧರ್ಮ, ಪರರ ವಿಚಾರಗಳಿಗೆ ಗೌರವಿಸುವುದೇ ಮನುಷ್ಯ ಪ್ರೀತಿಯ ನಿಜವಾದ ನೆಲೆಯ ಸಂಪತ್ತೆಂದು ಸಾರಿದ್ದನ್ನು ಪುನ ಉಚ್ಚರಣೆ ಮಾಡಿದ್ದನ್ನು ಹಾಗು ಆದಿಕವಿ ಪಂಪನ ಆಸೆಯವಾದ 'ಮನುಷ್ಯ ಕುಲಂ ತಾನೊಂದೆ ವಲಂ' ಎಂಬುದು ಚಲಪತಿಯ ಧಮನಿ ಧಮನಿಯಲ್ಲಿಯೂ ಹರಿಯುತ್ತಿರುವ ಅಂಶವನ್ನು ಕಾದಂಬರಿಕಾರ ಎಂ.ಕೆ.ಶೇಖ್ ರವರು ಸಾವಧಾನ ಚಿತ್ತದಿಂದ ಮೇಲು ಧ್ವನಿಯಲ್ಲಿ ಹೇಳಿಸಿದ್ದಾರೆ. ಏಕಸಂಸ್ಕೃತಿ ಪ್ರತಿಪಾದಕ, ದಿವಾನಜಿಯ ಗೋಸುಂಬೆಗಳ ನಿಜ ಬಣ್ಣ ಕೊನೆಗೂ ಬಯಲು ಮಾಡುವಲ್ಲಿ ಯಶಸ್ವಿ ಯಾಗುವುದೇ ಕಾದಂಬರಿಯ ಹೆಗ್ಗಳಿಕೆ. ವೈಚಾರಿಕತೆಯ ಹಿನ್ನೆಲೆಯ ಕಥಾವಸ್ತು ಜಾತಿ-ಧರ್ಮದ ಗೊಡವೆ ಬಿಟ್ಟು ವಿಶ್ವಭಾತೃತ್ವದ ಬಾವುಟ ಹಾರಿಸಲು ಚಲಪತಿ ಸನ್ನದ್ಧನಾಗುವ ಸನ್ನಿವೇಶ ನಾಟಕೀಯತೆಯಂತೆ ಕಂಡರೂ ಅನಿವಾರ್ಯ ಕೂಡ. ನೀನು ಬದುಕು ಇತರರನ್ನೂ ಬದುಕಲು ಬಿಡು ಎಂಬುದು ಕಾದಂಬರಿಯ ಹೂರಣ. ಜಾತಿ-ಧರ್ಮಗಳ ರಾಜಕೀಯ ಸಂಘರ್ಷದಲ್ಲಿ ವಿಶ್ವ ಭ್ರಾತತ್ವ ಸಾರುತ್ತಲೇ ಬಹುತ್ವದ ಮಹಾಬಯಲಿನ ದರುಶನ ಓದುಗರಲ್ಲಿ ಗೋಚರಿಸುತ್ತದೆ. ಎಂದು ಎ.ಎಸ್.ಮಕಾನದಾರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಎಂ.ಕೆ.ಶೇಖ್ (ಮೌಕುಶೇ) ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದವರಾದವರು. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷೆಯ ಶಿಕ್ಷಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕವನ ಸಂಕಲನ, ಕಥಾ ಸಂಕಲನ, ವಿಮರ್ಶೆ ಕೃತಿ, ಆಧುನಿಕ ವಚನ ಸಂಕಲನ, ಚುಟುಕು ಸಂಕಲನ, ಸಂಪಾದನಾ ಕೃತಿ ಹಾಗೂ ಕಾದಂಬರಿಯಂತ ಎಲ್ಲಾ ಪ್ರಕಾರದ ಸಾಹಿತ್ಯದ ಒಟ್ಟು ಎಂಟು ಕೃತಿಗಳನ್ನು ಬರೆದು ಲೋಕಾರ್ಪಿಸಿದ್ದಾರೆ. ಇವರ "ನೂಲು" ಎಂಬ ಕಥಾಸಂಕಲನದ "ಮನುಷ್ಯತ್ವದೆಡೆಗೆ ಆಹ್ವಾನ" ಎಂಬ ಕಥೆಯು ವಿಜಯಪುರ ಜಿಲ್ಲೆಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ...
READ MORE