ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ತಮ್ಮದೇಯಾದ ‘ಛಾವು’ ಮೂಡಿಸಿದ್ದಾರೆ. ಮೊದಲು ಕವಿಗಳಾಗಿ ಆಮೇಲೆ ಗದ್ಯದಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಆದರೆ ಇವರ ಹೆಚ್ಚಿನ ಬರವಣಿಗೆ ಕಾದಂಬರಿ ಸಾಹಿತ್ಯ. ಮಹಿಳೆಯರ ಅನೇಕ ಮುಖಗಳನ್ನು ಚಿತ್ರಿಸಿ ಜೀವನದ ಅವರ ಸುಖ-ದುಃಖ, ಅಂತಃಕರಣ, ಸಿಟ್ಟು, ಸೆಡವು ಮುಂತಾದುವನ್ನೆಲ್ಲ ಹೃದಯಂಗಮವಾಗಿ ಸಾಹಿತ್ಯದಲ್ಲಿ ಮೂಡಿಸಿ ಕನ್ನಡ ಓದುಗರಿಗೆ ಅರ್ಪಿಸಿದ್ದಾರೆ.ಪ್ರಸ್ತುತ ಅವರ ಸಾಮಾಜಿಕ ಕಾದಂಬರಿ ಶಾಂತಿ ಸುಧಾ. ಸಾಮಾಜಿಕ ಸನ್ನಿವೇಶಗಳನ್ನು ಆಧಾರಿತವಾಗಿರುವ ಕಾದಂಬರಿಯಿದು.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE