ಎಂ.ಸಿ.ಪದ್ಮರವರು ಸರಳ ಬರಹ ಶೈಲಿಯ ಲೇಖಕಿ.ಈ ಕಾದಂಬರಿ ಸಹ ಒಬ್ಬ ಸಾಧಾರಣ ಮಧ್ಯಮ ವರ್ಗದ ಮುಗ್ಧ ಹುಡುಗಿಯ ಜೀವನ ಏನೆಲ್ಲ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನುಸುಂದರವಾಗಿ ತೆರೆದಿಡುತ್ತಾ ಹೋಗುತ್ತದೆ.ಹೆತ್ತವರ ಪ್ರೀತಿಗೆ ಹೊರತಾಗಿ ಬೆಳೆವ ಈ ತರುಣಿ ಚಿಕ್ಕಮ್ಮನ ಕಪಿ ಮುಷ್ಠಿಯಲ್ಲಿ ಸಿಲುಕಿ ಹಿಡಿ ಪ್ರೀತಿಗಾಗಿ ಸದಾ ಹಂಬಲಿಸುವ ಪರಿಸ್ಥಿತಿಯಲ್ಲಿರುತ್ತಾಳೆ.ಪ್ರಥಮ ಮುದ್ರಣ- 1984, ದ್ವಿತೀಯ ಮುದ್ರಣ -2011
ಹೆಣ್ಣಿನ ಅಂತರಾಳವನ್ನು ಅರಿತು, ಅದಕ್ಕೊಂದು ಸಾಹಿತ್ಯ ರೂಪಕ ಕೊಟ್ಟು ಕಾದಂಬರಿಗಳನ್ನು ರಚಿಸುತ್ತಿದ್ದರು ’ಪದ್ಮಾ ಎಂ.ಸಿ’ ಅವರು. ಅವರು 1946 ಮಾರ್ಚ್ 19ರಂದು ಬೆಂಗಳೂರಿನಲ್ಲಿ ಜನಿಸಿದರು. ’ಪ್ರೇಮಮಯಿ, ಸವತಿ ಕಸೂರಿ, ಸುಪ್ರಭಾತ, ಶಶಿಕಿರಣ, ಮಂಜು ಕರಗಿತು, ಪ್ರೇಮ ವಸಂತ, ಅಂತರಾಳ, ಸತಿ’ ಅವರ ಪ್ರಮುಖ ಸ್ತ್ರೀ ಸಂವೇದನೆಯುಳ್ಳ ಕಾದಂಬರಿಗಲು. “ಚಿಟ್ಟೆಯಾಗಿ ಹಾರಿತು” ಅವರ ಮೊದಲ ಕಥಾ ಸಂಕಲನ. ತಮಿಳಿನಿಂದ ಕನ್ನಡಕ್ಕೆ ’ದೀಪದ ಹುಳು’ ಕೃತಿಯನ್ನು ಅನುವಾದಿಸಿದ್ದಾರೆ. ...
READ MORE