‘ಎರಡನೇ ದೇವರು’ ಕೃತಿಯು ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಕಾದಂಬರಿಯಾಗಿದೆ. ಈ ಕಾದಂಬರಿ ಸುಧೀರ್ಘವಾಗಿದ್ದರೂ, ಪಾತ್ರ ಪೋಷಣೆ, ಒಂದಕ್ಕೊಂದು ಅಂಟಿಕೊಂಡು ಅನಾವರಣಗೊಳ್ಳುವ ಘಟನೆಗಳು, ಅಲ್ಲಲ್ಲಿ ಸಿಂಪಡಿಸಿದ ಹಾಸ್ಯಪ್ರಜ್ಞೆ, ಮಂಗಳೂರು ಶೈಲಿಯಲ್ಲಿ ಬರೆದ ಕನ್ನಡ ಹಾಗೂ ಎಚ್.ಆರ್. ಕ್ಷೇತ್ರದ ಕೆಲವು ಸನ್ನಿವೇಶಗಳು ಸರಾಗವಾಗಿ ಹರಿಯುತ್ತಾ ಒಂದು ಸಂತೃಪ್ತ ಓದಿ ನೀಡುತ್ತದೆ. ಒಂದು ಹೆಣ್ಣನ್ನು ಪ್ರಮುಖ ಪಾತ್ರವಾಗಿ ಕಾದಂಬರಿ ಬರೆಯುವುದು ಸುಲಭವಲ್ಲ. ಕಥೆ ಓದಿದ ಮೇಲೂ ನೇತ್ರಾವತಿ, ಶ್ಯಾಮಲೆ, ಪೂರ್ಣಚಂದ್ರ, ನಾರಾಯಣರ ಪಾತ್ರಗಳು ನಿಮ್ಮ ಜೊತೆಯೇ ಉಳಿದು ಬಿಡುತ್ತದೆ. ಒಂದು ರೀತಿಯ ಸಾಮಾಜಿಕ ಥ್ರಿಲ್ಲರ್ ಕಾದಂಬರಿ ಓದುಗರನ್ನು ಓದಿಸಿಕೊಂಡು ಹೋಗುತ್ತದೆ.
ಕತೆಗಾರ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರು (ಜನನ: 1969 ಡಿಸೆಂಬರ್ 13) ಮಂಜೇಶ್ವರದ ಕೊಡ್ಲಮೊಗರುದವರು. ಕೊಡ್ಲಮೊಗರು ಹಾಗೂ ಮಂಗಳೂರಿನಲ್ಲಿ ಶಿಕ್ಷಣ ಪಡೆದು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಅಂತಾಷ್ಟ್ರೀಯ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪೂರ್ಣಸತ್ಯ, ಮದನಿಕೆ ಹಾಗೂ ಹಾಂಟೆಂಡ್ ಹೊಸಮನೆ ಇವರ ಕೃತಿಗಳು. ...
READ MORE