'ನಾಳೆಗಳು ಬರಲಿ' ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ಬಂಜೆತನವೆಂಬುದು ಈಗ ದೊಡ್ಡ ಸಮಸ್ಯೆಯೇನೂ ಅಲ್ಲ. ಬಾಡಿಗೆ ಗರ್ಭದ ಫಲದಿಂದ ಮಗುವನ್ನು ಪಡೆಯುವ ದಂಪತಿಗಳು ಅನೇಕರಿದ್ದಾರೆ. ಆದರೆ ಅಂಥದ್ದೊಂದು ಗರ್ಭಧರಿಸಿದ ಹೆಣ್ಣಿನ ಪರಿಸ್ಥಿತಿ, ಅವಳ ಮನಸ್ಸಿನ ತುಮುಲ ಹೇಗಿರಬಹುದು? ಇಂದಿನ ಐ.ಟಿ. ಯುಗದಲ್ಲಿ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಯನ್ನು ಪ್ರತಿಬಿಂಬಿಸುವ ಕಾದಂಬರಿ ‘ನಾಳೆಗಳು ಬರಲಿ’.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE