ಖ್ಯಾತ ಕಾದಂಬರಿಕಾರ್ತಿ ಎಂ.ಕೆ. ಇಂದಿರಾ ಅವರು ಬರೆದ ಕಾದಂಬರಿ-ಫಣಿಯಮ್ಮ. ಮಲೆನಾಡಿನ ಸ್ಥಿತಿಗತಿ, ಜೀವನಶೈಲಿಯನ್ನು ಹೃದಯಂಗಮವಾಗಿ ಚಿತ್ರಿಸುವ ಕಾದಂಬರಿಕಾರ್ತಿ ವಿಧವೆಯೊಬ್ಬರ ಬದುಕು ಹಾಗೂ ಸಮಾಜ ಅವಳನ್ನು ನಡೆಸಿಕೊಳ್ಳುವ ರೀತಿ-ಇವು ಕಥಾವಸ್ತುಗಳು.
ಕಥಾ ನಾಯಕಿ ಫಣಿಯಮ್ಮ ಮಲೆನಾಡಿನ ಒಂದು ಹಳ್ಳಿಯ ನಿವಾಸಿ. ಆಕೆ ಎಂಟು ವರ್ಷದ ಬಾಲೆ. ಆಗಲೇ ಅವಳಿಗೆ ಮದುವೆ. ಪತಿಗೆ ಹಾವು ಕಚ್ಚಿ ಸಾವು. ಆಗ ಅವಳಿಗೆ 9 ವರ್ಷ. ವಿಧವೆ ಪಟ್ಟ. 13 ವರ್ಷಕ್ಕೆ ಆಕೆ ಋತುಮತಿಯಾಗುತ್ತಾಳೆ. ತಲೆಬೋಳಿಸಿ ಮನೆಯ ಮೂಲೆಗೆ ತಳ್ಳುತ್ತಾರೆ. ಈಕೆ ಬದುಕಿದ್ದು 108 ವರ್ಷ. ಅಕ್ಕ-ತಂಗಿ-ಅಣ್ಣ ಹೀಗೆ ಅವರಿವರ ಮಕ್ಕಳನ್ನು, ಮೊಮ್ಮಕ್ಕಳನ್ನು ಜೋಪಾನ ಮಾಡುತ್ತಾ, ಅವರ ಕಷ್ಟಪರಿಹರಿಸುತ್ತಾ, ಉಸಿರಾಡಿಸಿದಷ್ಟು ಕಾಲವೂ ಬಿಳಿ ಸೀರೆ ಧರಿಸಿಯೇ ಬದುಕು ಸವೆಸಿದ ಜೀವ. ಮದುವೆ, ನಾಮಕರಣ ಹೀಗೆ ವಿವಿಧ ಸಂಭ್ರಮಾಚರಣೆ ನಡೆಯುತ್ತಿರುತ್ತವೆ. ಆಗ ಈ ಫಣಿಯಮ್ಮಗೆ ಯಾವುದೂ ಕಾಡುವುದಿಲ್ಲವೆ? ಇಂತಹ ಸಂಭ್ರಮದಿಂದ ತಾನು ವಂಚಿತಳಾಗಿದ್ದೇನೆ ಎಂದು ಅನಿಸುವುದಿಲ್ಲವೆ? ತನ್ನದಲ್ಲದ ತಪ್ಪಿಗೆ ತಾನೇಕೆ ಇಂತಹ ಬದುಕು ಸಾಗಿಸಬೇಕು ಎಂಬ ಆಕ್ರೋಶ ಕಾಡಲಿಲ್ಲವೆ? ಇಂತಹ ಪ್ರಶ್ನೆ, ಹತಾಶೆ, ನಿರಾಶೆ, ವ್ಯವಸ್ಥೆಯ ವಿರುದ್ಧ ಆಕ್ರೋಶ ಬರಲೇ ಇಲ್ಲವೆ? ಇಂತಹ ಸಂಶಯ-ಪ್ರಶ್ನೆ ಅಥವಾ ಎಲ್ಲೆ ಇಲ್ಲದ ಸಂಯಮ-ಸಹನೆ ಇರುವ ಆ ವ್ಯಕ್ತಿತ್ದ ಸ್ವರೂಪ-ಸ್ಭಾವ ಎಂತಹದ್ದು? ಮನೋವೈಜ್ಞಾನಿಕವಾಗಿ ಕಾಡುವ ಇಂತಹ ವಿಚಾರ ಸರಣಿಗೆ ಈ ಕಾದಂಬರಿ ಉತ್ತಮ ವಸ್ತು-ಸಾಮಗ್ರಿಗಳನ್ನು ನೀಡುತ್ತದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ 2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...
READ MORE