‘ಎಸ್ ಯು ವಿ’ ಕೃತಿಯು ಸದಾನಂದ ಹೆಗಡೆ ಅವರ ಕಾದಂಬರಿಯಾಗಿದೆ. ಮಂಗಳೂರಿನ ಚುರುಕು ಬಸ್ಸುಗಳ ಇತಿಹಾಸ ತುಂಬ ಕುತೂಹಲಕರವಾಗಿದೆ ಎಂಬುದನ್ನು ಇಲ್ಲಿ ಪ್ರಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ವಿವಿಧ ಕಾರುಗಳ ಪೈಕಿ ಸ್ಫೋರ್ಟ್ಸ್ ಯೂಟಿಲಿಟಿ ವಾಹನದ ವಿಚಾರವನ್ನು ಕೂಡ ಇಲ್ಲಿ ಕಾಣಬಹುದು. ಎಸ್ ಯುವಿ, ವಿಹಾರ, ಹಳೆ ಸೇತುವೆ, ಪಾರ್ಕಿಂಗ್ ಸಮಸ್ಯೆ, ಕಾರು ಸಾಲ, ಹಳೆಯ ಅಂಬಾಸೆಡರ್, ಮಾರುತಿ-800, ಹೊಸ ಖರೀದಿ ಪೆಟ್ರೋಲ್, ಸಾರ್ವತ್ರಿಕ ನಿಲ್ದಾಣ, ಇಕ್ಕಟ್ಟು ರಸ್ತೆ, ಕೊಳೆ ತೊಳೆದು, ಅಡ್ಡ ಬಂದ ಸೈಕಲ್, ಧರ್ಮಸ್ಥಳ ಪ್ರವಾಸ, ಲೋಗೋ ಕಳವು, ನಿಧಾನ, ಇಕ್ಕಟ್ಟು ಹಾದಿ, ಪ್ರಣಯ ಪಕ್ಷಿ, ಪೊಲೀಸ್ ಕೇಸ್, ಗಲಾಭೆ ನಂತರ, ಹಿಂಗನ್ನಡಿ, ವೈಪರ್, ನಿಶ್ಯಬ್ಧ, ಮುಂಬೆಳಕು ವಿಚಾರಗಳನ್ನು ಒಳಗೊಂಡಿದೆ.
ಸದಾನಂದ ಹೆಗಡೆ ಹರಗಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ವೃತ್ತಿಯಲ್ಲಿ ಪತ್ರಕರ್ತರು. ಧಾರವಾಡದಲ್ಲಿ ಬಿಎಸ್ಸಿ ಪದವಿಯನ್ನು ಪೂರೈಸಿರುವ ಅವರು ಮೈಸೂರಿನಲ್ಲಿ ಎಂ.ಎ ಸೈಕಾಲಜಿ ಪದವಿಯನ್ನು ಪಡೆದಿರುತ್ತಾರೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರದಲ್ಲಿ ಕೆಲಕಾಲ ಮಾರುಕಟ್ಟೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಕ್ಷಗಾನ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತೆಂಕುತಿಟ್ಟಿನ ದೇವೀ ಮಹಾತ್ಮೆ ಕುರಿತು ಕಾಫಿಟೇಬಲ್ ಪುಸ್ತಕವನ್ನು ಹೊರ ತಂದಿದ್ದಾರೆ. ಚಿತ್ರಕಲೆ, ಏಕ ವ್ಯಕ್ತಿ ಪ್ರದರ್ಶನ ಅವರ ಹವ್ಯಾಸ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇವರ ನೇತೃತ್ವದಲ್ಲಿ ಚಿತ್ರಕಲಾ ಪರಿಷತ್ತು ಹೊರತಂದ ಸ್ವಸ್ತಿ ಅರ್ಟ್ ಬುಲೆಟಿನ್ ಗಮನ ಸೆಳೆದಿರುತ್ತದೆ. ದಾವಣಗೆರೆಯಲ್ಲಿ ಚಿತ್ರಕಲಾ ...
READ MORE