ಬಾಳುವಂತ ಹೂವೆ

Author : ಸುಲಕ್ಷಣಾ ಶಿವಪೂರ

Pages 116

₹ 110.00




Year of Publication: 2021
Published by: ಬೊಂಬೆ ಪ್ರಕಾಶನ
Address: #617, 1ನೇ ಕ್ರಾಸ್, 2ನೇ ಹಂತ, ‘ಎಂ; ಬ್ಲಾಕ್, ಕುವೆಂಪು ನಗರ ಮೈಸೂರು

Synopsys

‘ಬಾಳುವಂತ ಹೂವೆ’ ಕೃತಿಯು ಸುಲಕ್ಷಣಾ ಶಿವಪೂರ ಅವರ ಕಾದಂಬರಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಸತೀಶ ಕುಲಕಣಿ ಅವರು, ಜಡ ಜಗತ್ತು ಮತ್ತು ಜೀವ ಜಗತ್ತಿನ ನಡುವೆ ಸಂಬಂಧವಿದೆ. ಗುಡ್ಡ, ಬೆಟ್ಟ, ಕಾಡು, ನದಿ, ಕೊಳದಂತಹ ಜಡ ಜಗತ್ತನ್ನು ತಡವಿದರೆ ಏನಾಗಬಹುದು ಎಂದು ಕೋವಿಡ್ ಕರಾಳ ಪರ್ವ ನಮಗೆ ಪಾಠ ಕಲಿಸಿದೆ. ಅನೇಕರು ಅನುವಿನ ಜೊತೆಗೆ ಹೋರಾಡಿದರೆ ಇನ್ನು ಕೆಲವರು ಸಮುದಾಯದ ಹಿತಕ್ಕಾಗಿ ಹೋರಾಡಿದವರಿ‌ದ್ದಾರೆ. ಇಂಥದೊಂದು ವಸ್ತುವಿನ ಸುತ್ತಲೂ ರಚಿತ ಕಾದಂಬರಿ ‘ಬಾಳುವಂತ ಹೂವೆ’ ಕೃತಿಯನ್ನು ಸುಲಕ್ಷಣಾ ಶಿವಪೂರ ಅವರು ಬರೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ ಇವರು ಕಾವ್ಯ, ಕಾದಂಬರಿ, ಕಥೆಗಳನ್ನೂ ಬರೆಯುವ ಹವ್ಯಾಸದ ಸುಲಕ್ಷಣಾ ಅವರು ಹಿಂದಿ ಭಾಷೆಯಲ್ಲಿಯೂ ಕಾವ್ಯ, ಕತೆ, ಕಾದಂಬರಿಗಳನ್ನೂ ಕೂಡ ಬರೆಯುತ್ತಾರೆ. ‘ಅಂತರಂಗದ ಅಲೆಗಳು’ ಇವರ ಕಾವ್ಯ ಸಂಕಲನ ಸಾಹಿತ್ಯ ಲೋಕದಲ್ಲಿ ನೀಡಿದ ಮೊದಲ ಕೊಡುಗೆಯಾಗಿದೆ. ‘ಬಾಳುವಂತೆ ಹೂವೆ’ ಕಾದಂಬರಿಯು ಕೋವಿಡ್ ಸಂಧರ್ಭದಲ್ಲಿ ಮಹಿಳೆಯೊಬ್ಬರು ತನ್ನ ಅಸ್ಮಿತೆಯನ್ನು ಉಳಿಸಿಕೊಂಡು, ಸಮಾಜದ ಹಿತ ಕಾಪಾಡಲು ಹೋರಾಡುವುದೇ ಕಾದಂಬರಿಯ ತಿರುಳು ಈ ಕೃತಿಯನ್ನು ಓದಿದಾಗ ನಮ್ಮ ಸುತ್ತಲೂ ನಡೆದಿರುವ ಘಟನೆಗಳು ನೆನಪಾಗುತ್ತವೆ ಎಂದಿದೆ.

About the Author

ಸುಲಕ್ಷಣಾ ಶಿವಪೂರ

ಸುಲಕ್ಷಣಾ ಶಿವಪೂರ ಅವರು ಮೂಲತಃ ಹುಬ್ಬಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವಿತೆ, ಕತೆ ಹಾಗೂ ಪ್ರವಾಸ ಕಥನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಸ್ಥಳೀಯ ಸಾಹಿತ್ಯ ಸಮ್ಮೇಳನ ಹಾಗೂ ಇತರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನವಾಚನ ಮಾಡಿದ್ದಾರೆ. ಧಾರವಾಡದ ‘ಕರ್ನಾಟಕ ಬಾಲ ವಿಕಾಸ ಅಕಾಡೆಮಿ' ವತಿಯಿಂದ ‘ಶಾಲಾ ಮಕ್ಕಳ  ಆರೊಗ್ಯ ಹಾಗೂ ಆಹಾರ’ ವಿಷಯದ ಕುರಿತು ಸಂಶೋಧನೆ ಮಾಡಿರುತ್ತಾರೆ. ಸ್ಟಾರ್ ಸುವರ್ಣ ನಡೆಸಿದ ಕನ್ನಡದ ಕೋಟ್ಯಾಧಿಪತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿರುವ ಅವರು ಹಿಂದಿ ಸಾಹಿತ್ಯದಲ್ಲಿ ಸುಮಾರು 500ಕ್ಕೂ  ಹೆಚ್ಚು ಶಾಯರಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅವರಿಗೆ ವಿವಿಧ ಸಂಸ್ಥೆ, ಸಂಘಟನೆಗಳ ವತಿಯಿಂದ ಸನ್ಮಾನಗಳನ್ನು ಪಡೆದಿರುತ್ತಾರೆ.  ಕೃತಿಗಳು ...

READ MORE

Related Books