ಕರ್ಣ ಕುಂಡಲಧಾರಿಣಿ

Author : ಪರಮ್ ಭಾರದ್ವಾಜ್

Pages 64

₹ 80.00




Year of Publication: 2020
Published by: ಬಿಳಿಕಲ್ಲು ಪ್ರಕಾಶನ
Address: ಬೋರಗಲ್ ಗುಡ್ಡೆ, ನಿಟ್ಟೆ ಪೋಸ್ಟ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ - 574110
Phone: 9980665368

Synopsys

ಪ್ರತಿ ಸಾಲನ್ನೂ ಅನುಭಾವದ ಕುಂಚದಲ್ಲಿ ಅದ್ದಿ ಚಿತ್ರಿಸಿದಂತಿರುವ ಪರಮ್ ಭಾರದ್ವಾಜ್ ಅವರ ಕಾದಂಬರಿ-ಕರ್ಣ ಕುಂಡಲಧಾರಿಣಿ. ತನ್ನ ವಿನೂತನ ಕತಾ ನಿರೂಪಣೆಯಿಂದ ಓದುಗರನ್ನು ಸೆಳೆಯುತ್ತದೆ. ಕೃತಿಗೆ ಆಶಯ ನುಡಿ ಬರೆದಿರುವ ಚಲನಚಿತ್ರ ನಿರ್ದೇಶಕ ಸುಧೀರ್‌ ಶಾನುಭಾಗ್‌ ಅವರು “ಕಥಾ ನಾಯಕ ಕರ್ಣನ ಸೋಲು, ಗೆಲುವು, ಸುಖ, ದುಃಖ, ಕಣ್ಣೀರು, ನಗು ಎಲ್ಲವನ್ನೂ ಗೆಳೆಯನೆಂಬ ಪಾತ್ರದ ಮೂಲಕ ಬಿಂಬಿಸಿರುವ ಈ ಕಥಾನಕ ಗೆಳೆತನದ ಅವಶ್ಯಕತೆಯನ್ನು ಹೇಳುವ ವಿಶಿಷ್ಟ ಬಗೆಯ ನಿರೂಪಣಾ ಶೈಲಿ ಹೊಂದಿರುವ ಕಿರು ಕಾದಂಬರಿ. ಸಾಮಾನ್ಯವಾಗಿ ಸಿನೆಮಾಗಳಲ್ಲಿರುವಂತಹ ಫ್ಲಾಷ್ಬ್ಯಾಕ್ ತಂತ್ರವನ್ನು ಕಥಾ ನಿರೂಪಣೆಯಲ್ಲಿ ಬಳಸಲಾಗಿದೆ. ಈ ತಂತ್ರ ಕಥೆಯನ್ನು ಕುತೂಹಲಕಾರಿಯಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ” ಎಂದು ಶ್ಲಾಘಿಸಿದ್ದಾರೆ.

About the Author

ಪರಮ್ ಭಾರದ್ವಾಜ್

ಲೇಖಕ ಪರಮ್ ಭಾರದ್ವಾಜ್ ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಆಡಿ ಬೆಳೆದದ್ದು ಕಾರ್ಕಳದ ಅಜ್ಜಿ ಮನೆಯಲ್ಲಿ. ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಬಿ.ಕಾಂ.. ಎಂ.ಪಿ.ಎಂ. ಕಾಲೇಜಿನಲ್ಲಿ ಎಂ.ಕಾಂ., ಆಳ್ವಾಸ್ ಕಾಲೇಜಿನಲ್ಲಿ B.Ed ಮುಗಿಸಿ ಅದೇ ಕಾಲೇಜಿನಲ್ಲೀ ಪದವಿ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದಾರೆ. ಕನ್ನಡ ಆಲ್ಲಂ ಹಾಡಿನ ರಚನೆ, ಸಂಗೀತ, ನಟನೆ ಹಾಗೂ ನಿರ್ಮಾಣ ಮಾಡಿರುವ ಇವರು ಹಲವು ಸಿನಿಮಾಗಳಿಗೆ ಚಿತ್ರಗೀತೆ ಬರೆದಿದ್ದಾರೆ. 27ರ ಹರೆಯದ ಈ ಶಿಕ್ಷಕ, ಲೇಖಕ, ಕವಿ, ಕಲಾವಿದ ನಾಗಿರುವ ಪರಮ್ ಕಾರ್ಯಕ್ರಮ ನಿರೂಪಕರು ಹೌದು. ‘Param Event Management’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ‘ಕರ್ಣ ಕುಂಡಲಧಾರಿಣಿ’ ಅವರ ...

READ MORE

Related Books