'ಎಲ್ಲೋ ಜೋಗಪ್ಪ ನಿನ್ನರಮನೆ' ಖ್ಯಾತ ಲೇಖಕ ಕುಂ.ವೀರಭದ್ರಪ್ಪ ಅವರ ಕಾದಂಬರಿ. ಈ ಕೃತಿಯ ಕುರಿತು ಬರೆಯುತ್ತಾ 'ನನ್ನ ಬಾಲ್ಯವನ್ನು ಸೃಜನಶೀಲವಾಗಿ ರೂಪಿಸಿದವರು ವೃದ್ಧರು, ನನ್ನಲ್ಲಿ ಜೀವನೋತ್ಸಾಹ ತುಂಬಿದವರು ವೃದ್ಧರೆ. ನನಗೆ ಕಥೆಗಳನ್ನು ಹೇಳುತ್ತಿದ್ದರು, ನನ್ನಿಂದ ಕಥೆಗಳನ್ನು ಹೇಳಿಸುತ್ತಿದ್ದರು. ಅಕ್ಷರಗಳ ಪಾಲಿಗೆ ಅಕ್ಷಯಪಾತ್ರಗಳಾದವರು, ಅನಕ್ಷರಸ್ಥ ವಿದ್ವಾಂಸರೆನಿಸಿದವರು' ಎನ್ನುತ್ತಾರೆ. ಜೊತೆಗೆ 'ಗ್ರಾಮೀಣ ಪ್ರಪಂಚದ ಸುಂದರ ರೂವಾರಿಗಳು, ವೃದ್ಧಾಪ್ಯದ ವಿಶ್ವವಿದ್ಯಾಲದ ಕುಲಪತಿಗಳು ವೃದ್ಧರೆ. ಹಳ್ಳಿಗಳ ವಾತ್ಸಲ್ಯದ ಹೂದೋಟದಲ್ಲಿ ಶತಮಾನಗಳ ಹಿಂದೆ ಅರಳಿರುವ ಇಂಥ ಎಷ್ಟೋ ಮುಪ್ಪಾನು ಮುದೇನು ಬಾಡದೆ ಮಾತೃ ಕಾಂಡದಿಂದ ಕಳಚದೆ ನಳನಳಿಸುತ್ತಿರುವರು, ಅಂಥ ಪ್ರಾಚೀನರು ದೊರಕುವುದು ಜನಗಣತಿ ಮಾಡುವವರ ಸುಕೃತವನ್ನವಲಂಭಿಸಿದೆ ಎಂದಿದ್ದಾರೆ. ಅಲ್ಲದೇ ಹಲವು ಸಹಸ್ರಾರು ಚಂದ್ರ ದರ್ಶನವನ್ನು ಮಾಡಿರುವ ಅವರ್‍ಯಾರು ತಮ್ಮ ವಯಸ್ಸನ್ನು ಮುನ್ನೂರಕ್ಕಿಂತ ಕಡಿಮೆ ಹೇಳುವುದಿಲ್ಲ. ಅಂಥ ಮಾಗಿದವರ ಒಡಲು ಅಸಂಖ್ಯ ಕಥೆಗಳ ಕಡಲು. ಕಥೆಗಳು ಪಯಣಿಸುವುದು ಅವರಲ್ಲಿಗೆ. ಅವು ಮರುಹುಟ್ಟು ಪಡೆಯುವುದೂ ಸಹ ಅದೆ ಒಡಲಲ್ಲೆ. ಇಂಥ ಅನುಭವಗಳ ನೇಪಥ್ಯದಲ್ಲಿ ಈ ಕಾದಂಬರಿಯಲ್ಲಿ ಪುರಾತನಳು ಇರುವುದು. ಆಕೆ ತನ್ನನ್ನು ತಾನು ಇನ್ನೆಲ್ಲೊ ಇರುವ ಅರಮನೆ ಕಥೆಯೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಂಡಿದ್ದಾಳೆ ಎಂಬುದಾಗಿ ಕಾದಂಬರಿಯ ಪೂರ್ವಾಪರವನನ್ನು ವಿವರಿಸಿದ್ದಾರೆ.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...
READ MOREತನು ಮನ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಕುಂವೀ ಅವರ 'ಎಲ್ಲೋ ಜೋಗಪ್ಪ ನಿನ್ನರಮನೆ' ಕಾದಂಬರಿ ಬಿಡುಗಡೆ ಕಾರ್ಯಕ್ರಮ.