ಶೆಲ್ಲಿ ಕೂಡ್ಲಿಗಿ ಅವರ ಕಾದಂಬರಿ ‘ಎರಡು ಲೋಟದ ಹುಡುಗಿ’ ಸಮಾಜದಲ್ಲಿ ನಿಯತ್ತಿನಲ್ಲಿ ಬದುಕುವವರಿಗೆ ಸಿಗುವ ಅಪಜಯ, ಕಟ್ಟಿಕೊಂಡ ಕನಸುಗಳ ಸೌಧಕ್ಕೆ ಬೀಳುವ ಬೆಂಕಿ,ಕಪಟತನದ ಸೋಂಕಿನಲ್ಲಿ ಬಹುಕಾಲ ಬದುಕಲಾರದ ಕುಹಕ ಜನ,ಬಡವರ ಶೋಚನೀಯತೆ, ಅವರ ಕಾಣುವ ಕಾಮ ಪಿಪಾಸಿ ಕಣ್ಣುಗಳು,ದರ್ಪಣದಂತೆ ಸುಂದರ ಹೊರವದನದ ಕರಾಳ ಹಾಗೂ ವಿಕೃತ ರೂಪ, ಒಂದೆಡೆಯಾದರೆ, ಅನಾಥವಾದ ಕುಟುಂಬಕ್ಕೆ ಆಸರೆಯಾಗುವ ಅಮಾಯಕ ಶಿಕ್ಷಕನ ಚತುರತೆಯ ಧ್ಯೇಯ ಧೋರಣೆ, ಅವನ ಪಾರದರ್ಶಕ ಒಳನೋಟ, ಸಾಹಸ,ಪರಿಶುದ್ಧವಾದ ಅಂತರಂಗದ ಒಳಛಾಪು,ಮಕ್ಕಳ ಬಗೆಗಿನ ಅನೂಹ್ಯ ಕರುಣೆ,ಮಗುವಿನ ಪ್ರತಿಭೆಯ ಗುರುತಿಸುವಿಕೆ, ಅನಾಥ ಹೆಣ್ಣಿಗೆ ನಿಸ್ವಾರ್ಥದಿಂದ ಮಾಡುವ ಸಹಾಯ, ಅದೇ ಹೆಣ್ಣು ಮಕ್ಕಳೊಂದಿಗೆ ಕಳೆದು ಹೋದಾಗಿನ ಹೃದಯ ವಿದ್ರಾವಕ ವೇದನೆ, ಇವೆಲ್ಲವುಗಳ ಸಂಘರ್ಷದ ನಡುವೆ ಬೆಂಕಿಯಲ್ಲಿ ಅರಳಿದ ಹೂಗಳಂತೆ ಈ ಕಾದಂಬರಿ ಭಾವನಾತ್ಮಕ ಚಿಗುರಾಗಿ, ಸುಳಿಯಾಗಿ,ಸಂಕೋಲೆಯ ಸ್ವರೂಪವಾಗಿ ಎದ್ದು ಬರುವಲ್ಲಿ ಜಯಿಸಿದೆ.
ಮಣೆಗಾರ್ ಶೆಕ್ಷಾವಲಿ ಎಂಬುದು ಇವರ ಪೂರ್ಣ ಹೆಸರು. ತಮ್ಮ ಹೆಸರಿನ (ಶೆ)ಕ್ಷಾವ(ಲಿ) ಮೊದಲ ಮತ್ತು ನಾಲ್ಕನೇ ಅಕ್ಷರ ಸೇರಿಸಿ ಜೊತೆಗೆ ಹುಟ್ಟೂರಿನ ಮೇಲಿನ ಅಭಿಮಾನದಿಂದ "ಶೆಲ್ಲಿ ಕೂಡ್ಲಿಗಿ" ಎಂಬ ಕಾವ್ಯನಾಮದ ಮೂಲಕ ನಾನು ಕೃತಿಗಳನ್ನು ರಚಿಸುತ್ತಿರುವೆ. ತಂದೆ ಅಬ್ದುಲ್ ರೋಫ್ ತಾಯಿ ಜಮಿಲಾ ಬೀ. ಪ್ರಾಥಮಿಕ ಶಿಕ್ಷಣ ಹುಟ್ಟೂರು ಕೂಡ್ಲಿಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 1992ನೇ ಸಾಲಿನಿಂದ ಆರಂಭವಾಯಿತು. 1999ರಿಂದ ಪ್ರೌಢ ಶಿಕ್ಷಣನ್ನು ಅದೇ ಊರಿನ ಐತಿಹಾಸಿಕ ಶಾಲೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಯಿತು. ಹೊಸಪೇಟೆ(ಪ್ರಸ್ತುತ ವಿಜಯನಗರ)ಯ ನೈಸೆಟ್ ...
READ MORE