ಲೇಖಕ ವಿ.ಎಂ. ಮಂಜುನಾಥ ಅವರ ಕಾದಂಬರಿ-ರಾಯಲ್ ಎನ್ ಫೀಲ್ಡ್. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂದೇಶ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಕವಿ, ಲೇಖಕ ವಿ.ಎಂ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ಕವನ ಸಂಕಲನ, 2008ರಲ್ಲಿ ಬ್ರಾಂಡಿ ಕಥಾಸಂಕಲನ, 2008ರಲ್ಲಿ ಕ್ರಿಮಿ ನಾಟಕ, 2012ರಲ್ಲಿ ...
READ MORE