ಪ್ರಾಚೀನಕಾಲದಿಂದಲೂ ಧರ್ಮ-ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಲೇ ಬಂದಿವೆ. ವಿಚಾರ ಚಿಂತಕರನ್ನೂ ಸಹ ಹಿಂಸೆ ನೀಡಿದ, ಕೊಂದ ಅಪರಾಧಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇಂತಹ ಕದನ ಕಥನದ ಮೂಲ ವಸ್ತುವನ್ನಿಟ್ಟುಕೊಂಡು ಕತೆಗಾರ ಕುಮಾರ ಬೇಂದ್ರೆ ಅವರು ‘ದಾಳಿ’ ಕಾದಂಬರಿಯನ್ನು ರಚಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದಿರುವ ಅಮರೇಶ ನುಗಡೋಣಿ, “ವಚನ ವಿಚಾರಗಳನ್ನು ಕೇಂದ್ರೀಕರಿಸಿದ ಸಾಹಿತ್ಯ ಕೃತಿಗಳು ಬ್ಯಾನ್ ಆಗಿವೆ. ಅನೇಕ ವ್ಯಕ್ತಿಗಳು ಹಲ್ಲೆಗೆ ಒಳಗಾಗಿದ್ದಾರೆ. ಹತ್ಯೆಗೂ ಈಡಾಗಿದ್ದಾರೆ. ಈ ಬ್ಯಾನ್ ಗಳು, ಹಲ್ಲೆಗಳು, ಹತ್ಯೆಗಳು ನಡೆದಿದ್ದರೂ ಆ ವಿಚಾರಗಳ ಹತ್ಯೆಯಾಗಿಲ್ಲ. ಈ ಸತ್ಯ ನಮ್ಮ ಮುಂದಿದೆ. ಭಯ, ಭೀತಿಗಳು ತಾತ್ಕಾಲಿಕವಾಗಿರುತ್ತವೆ. 'ದಾಳಿ' ಕಾದಂಬರಿಯ ವಸ್ತು, ವಿಚಾರಗಳ ಹಿನ್ನೆಲೆಯಲ್ಲಿ ಈ ವಿಚಾರಗಳನ್ನು ಹೇಳಬೇಕಾಯಿತು. ಕುಮಾರ ಬೇಂದ್ರೆ ಅವರಿಗೆ 'ದಾಳಿ' ಕಾದಂಬರಿ ಬರೆಯಲು ವಿಚಾರವಾದಿಗಳ ಹತ್ಯೆ ಘಟನೆಗಳು ಪ್ರೇರಣೆಯಾಗಿವೆ. 'ದಾಳಿ' ಒಂದು ಫಿಕ್ಷನ್ ಪಠ್ಯ ಅಷ್ಟೆ. ಅರ್ಧ ವಾಸ್ತವ, ಅರ್ಧ ಕಲ್ಪಿತ ಎಂಬಂತೆ ಕಾಣುತ್ತದೆ” ಎಂದಿದ್ದಾರೆ.
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...
READ MORE