`ಸೌಭಾಗ್ಯ ವಂಚಿತೆ’ ಕೃತಿಯು ಆಗುಂಬೆ ಗಣೇಶ್ ಹೆಗ್ಗಡೆಯವರ ಕಾದಂಬರಿಯಾಗಿದೆ. ಸೌಭಾಗ್ಯ ವಂಚಿತೆ ಕಾದಂಬರಿಯೂ ಹದಿನೇಳು ಅಧ್ಯಾಯಗಳಿಂದ ಕೂಡಿದ್ದು, ಅವರು ಬಳಸಿರುವ ಭಾಷಾಶೈಲಿಯೂ ಸುಂದರವಾಗಿ ಹೊಸದಾಗಿದೆ. ಭೂಸುಧಾರಣೆ ಕಾಯ್ದೆ ಅದೆಷ್ಟೋ ಕುಟುಂಬಗಳಿಗೆ ವರದಾನವಾಗಿದೆ. ಆದರೆ ಭೂಮಿ ಕಳೆದುಕೊಂಡು ಅನಾಥರಾದ ಕುಟುಂಬಗಳು ಇನ್ನೂ ಆ ನೋವಿನಿಂದ ಹೊರಬಂದಿಲ್ಲ ಎಂಬುದು ಈ ಕೃತಿಯಿಂದ ತಿಳಿಯುತ್ತದೆ. ಇದೊಂದು ಸತ್ಯ ಕಥೆಯ ಪ್ರೇರೆಣೆಯಿಂದ ಬರೆಯಲ್ಪಟ್ಟ ಕಥೆಯಾಗಿದೆ. ಕಾದಂಬರಿಯುದ್ದಕ್ಕೂ ಅಚ್ಚುಕಟ್ಟಾದ ಭಾಷೆಯ ಹಿಡಿತ ಆಸ್ವಾದಿಸಬಹುದು.
ಡಾ ll ಆಗುಂಬೆ ಗಣೇಶ್ ಹೆಗ್ಗಡೆಯವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಬೆಳಂದೂರು ನೆರಳ ಕೋಡಿಗೆಯವರು. ಮೂಲತಃ ಕೃಷಿಕರಾಗಿರುವ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಸಾಹಿತ್ಯ ವಲಯದ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಹೊಂದಿದ್ದಾರೆ. ಯುವ ಬರಹಗಾರರಾಗಿರುವ ಲೇಖಕರು ಏಳಕ್ಕೂ ಹೆಚ್ಚಿನ ಸಂಕಲನಗಳನ್ನು ಹೊರ ತಂದಿದ್ದಾರೆ. ಕೃತಿಗಳು: ಸೌಭಾಗ್ಯ ವಂಚಿತೆ ...
READ MORE