'ಹರಟೆ ಕಷಾಯ’ ಜೀವನ ಸಮಭ್ರಮಕ್ಕೊಂದು ಟಾನಿಕ್ ಕೃತಿಯು ರಾಜು ಅಡಕಳ್ಳಿ ಅವರ ಕಾದಂಬರಿಯಾಗಿದೆ. ಇಲ್ಲಿ ನಿತ್ಯದ ಘಟನೆಗಳಿಗೆ ಕಚಗುಳಿ ನೀಡುವ, ಬೇರೆಯವರ ಕಾಲೆಳೆಯುವ ಕೆಲಸದಲ್ಲೂ ಒಂಥರಾ ಖುಷಿ ನೀಡುವ ವಿಚಾರ ನೀಡುವ ಅನುಭಗಳಿವೆ. ಮಿನಿ ಗದ್ಯ, ಹನಿ ಪದ್ಯಗಳನ್ನು ಅಲ್ಲಲ್ಲಿ ನೀಡಲಾಗಿದ್ದುಮ ಅಡಕಳ್ಳಿಯವರು ಗಂಭೀರ ವಿಷಯಗಳನ್ನು ತಿಳಿ ಹಾಸ್ಯದ ಧಾಟಿಯಲ್ಲಿ ತೆರೆದಿಟ್ಟಿರುವುದು ವಿಶೇಷವೇ ಎನ್ನಬಹುದು. ಜೀವನದ ಅನೇಕ ವಿಚಾರಗಳಿಗೆ ಒಂದಷ್ಟು ಪನ್ ಮತ್ತು ಫನ್ ಗಳನ್ನು ಅಡಕಳ್ಳಿಯವರು ಸೇರಿಸಿ ಕೊಟ್ಟಿರುವುದರಿಂದ ಈ ಹರಟೆ ಕಷಾಯದ ರುಚಿ - ಇದರ ವಿಷಯಗಳಲ್ಲಿರುವ ಅಭಿರುಚಿ ಹೆಚ್ಚಿದೆ ಎಂಬುದರಲ್ಲಿ ಅನುಮಾನವಿಲ್ಲ.
ಪತ್ರಕರ್ತ ರಾಜು ಅಡಕಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯವರು. ಅವರು ಅಪರೂಪದ ಮಹತ್ವದ ಸಾಧನೆ ಮಾಡಿದ ಆ ಜಿಲ್ಲೆಯ ಸಾಧಕರನ್ನು ಗುರುತಿಸಿ ಜನಪ್ರಿಯ ದೈನಿಕ ‘ಲೋಕಧ್ವನಿ’ಯಲ್ಲಿ ಬರೆದ ‘ವ್ಯಕ್ತಿ-ಶಕ್ತಿ’ ಅಂಕಣ ಪುಸ್ತಕವಾಗಿ ಪ್ರಕಟಿತವಾಗಿದೆ. ಕೃತಿಗಳು: ವ್ಯಕ್ತಿ-ಶಕ್ತಿ ...
READ MORE