ಸಂಗೀತ ಸಮ್ಮೋಹಿನಿ ಎಂಬುದು ಲೇಖಕ ಹ.ಶಿ. ಭೈರನಟ್ಟಿ ಅವರ ವೈಚಾರಿಕ ಕಾದಂಬರಿಯಾಗಿದೆ. ಕಂಪ್ಯೂಟರ್ ವಿಜ್ಞಾನ ಸ್ಥಿತ್ಯಂತರ ಪಡೆಯುತ್ತದೆ. ದ್ವಿಮಾನ(ಬೈನರಿ) ಬದಲು ತ್ರಿಮಾನ ಪದ್ಧತಿಯನ್ನು ಅಳವಡಿಸಿದಾಗ ಕಂಪ್ಯೂಟರುಗಳು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತವೆ. ಮನುಷ್ಯರೊಂದಿಗೆ ಪೈಪೋಟಿಗಿಳಿಯುತ್ತವೆ. ಸಂಗೀತ ಕ್ಷೇತ್ರವು ಇದಕ್ಕೆ ಹೊರತಾಗುವುದಿಲ್ಲ. ಒಂದು ಡೂರೋ ‘ಸಮ್ಮೋಹಿನಿ’ ರಾಗವನ್ನು ಸೃಷ್ಟಿಸಿ ಪ್ರಸ್ತುತಪಡಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಕಂಪನಗಳನ್ನೆಬ್ಬಿಸುವ ಕಾದಂಬರಿ ಇದಾಗಿದೆ.
ವೈಜ್ಞಾನಿಕ ಕಾದಂಬರಿ ಪ್ರಕಟಿಸಿರುವ ಹನುಮಂತ ಶಿ. ಭೈರನಟ್ಟಿ ಅವರು ಕನ್ನಡದ ಪ್ರಮುಖ ಚಿಂತಕ-ಲೇಖಕರಲ್ಲಿ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದವರು. 1950ರ ಮೇ 2ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ಜೀವ ವಿಮಾ ನಿಗಮ (ಎಲ್.ಐ.ಸಿ.)ದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಹಲವು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರು 2019ರ ಮೇ 5ರಂದು ಧಾರವಾಡದಲ್ಲಿ ನಿಧನರಾದರು. ...
READ MORE