ಹೆಣ್ಣಿನ ತಾಳ್ಮೆ

Author : ಶ್ರೀಮತಿ ಜಿ.ಎಂ.ರಾಜೇಶ್ವರಿ

Pages 220

₹ 260.00




Year of Publication: 2023
Published by: ಯುಕ್ತ ಪ್ರಕಾಶನ
Address: ನಂ. 2109, ಮಧ್ವಾಚಾರ್ ರಸ್ತೆ, ಕೆ.ಆರ್‌. ಮೊಹಲ್ಲಾ, ಮೈಸೂರು- 570004
Phone: 9632587422

Synopsys

‘ಹೆಣ್ಣಿನ ತಾಳ್ಮೆ’ ಜಿ.ಎಂ.ರಾಜೇಶ್ವರಿಯವರ ಸಾಮಾಜಿಕ ಕಾದಂಬರಿಯಾಗಿದೆ. ಇದಕ್ಕೆ ಡಾ. ನಿಷ್ಠಿ ರುದ್ರಪ್ಪನವರ ಬೆನ್ನುಡಿ ಬರಹವಿದೆ: ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಸಾಹಿತ್ಯವು ಒಂದು ಪ್ರಕಾರವಾಗಿದ್ದು, ಕನ್ನಡದಲ್ಲಿ ಅನೇಕ ಕಾದಂಬರಿಗಳು ಲೋಕಾರ್ಪಣೆಗೊಂಡಿವೆ. ಬಳ್ಳಾರಿಯ ಶ್ರೀಮತಿ ಜಿ.ಎಂ. ರಾಜೇಶ್ವರಿಯವರು ರಚಿಸಿರುವ 'ಹೆಣ್ಣಿನ ತಾಳ್ಮೆ' ಈ ಕಾದಂಬರಿಯು ಅವರ ಪ್ರಥಮ ಪ್ರಯತ್ನವಾಗಿದೆ. ಕಾದಂಬರಿಯ ಕಥಾ ನಾಯಕಿ ಗೀತಾಳ ಕೌಟುಂಬಿಕ ಜೀವನದ ದಟ್ಟವಾದ ಅನುಭವಗಳನ್ನು ಕುರಿತದ್ದು ಆಗಿದೆ. ವಿಶೇಷವಾಗಿ ಈ ಕಾದಂಬರಿಯು ಪ್ರಾದೇಶಿಕ ಬಳ್ಳಾರಿಯ ಭಾಷೆಯನ್ನು ಸಮರ್ಥವಾಗಿ ರಾಜೇಶ್ವರಿಯವರು ಬಳಸಿಕೊಳ್ಳುವ ಮೂಲಕ ಆಧುನಿಕ ವಿದ್ಯುನ್ಮಾನ ಮಾಧ್ಯಮದ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಅನೇಕ ಶಬ್ದಗಳನ್ನು ನೆನಪಿಗೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. 'ಅತ್ತೆಯ ಮನೆಯಲ್ಲಿ ತ್ತೊತ್ತಾಗಿ ಇರಬೇಕು, ಹೊತ್ತಾಗಿ ನೀಡಿದರೆ ಉಣಬೇಕು, ನನ ಮಗಳೆ ತವರು ಮನೆಗೆ ಹೆಸರು ತರಬೇಕು' ಎನ್ನುವ ಜನಪದ ಹಾಡು ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆದರೆ ಇಂದು ಕಾಲ ಬದಲಾಗಿದೆ. ಹೆಣ್ಣು ಗಂಡು ಇಬ್ಬರೂ ಸರಿ ಸಮನಾಗಿ ದುಡಿಯುವ ಸಂದರ್ಭದಲ್ಲಿ ಅತ್ತೆಯ ಕಾಟವನ್ನು ಸಹಿಸಿಕೊಳ್ಳುವ ಸೊಸೆಯಂದಿರು ಇಂದಿನ ಕಾಲದಲ್ಲಿ ವಿರಳ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

Related Books