ಪ್ರೀತಿಯ ಕೂಗು ಕಾದಂಬರಿ ಪ್ರೀತಿಯ ವಿವಿಧ ಮಜುಲುಗಳನ್ನು ಸಾದರಪಡಿಸುತ್ತದೆ. ಕಾದಂಬರಿಯ ಪಾತ್ರಗಳು ಪ್ರೀತಿಯ ಮುಖಗಳನ್ನು ಅಚ್ಚುಕಟ್ಟಾಗಿ ಪ್ರತಿನಿಧಿಸುತ್ತವೆ. ಕಾದಂಬರಿಯ ನಾಯಕ ಆನಂದನ ಪ್ರೀತಿ ನಿಷ್ಕಾಮ ಮತ್ತು ಪ್ರಾಂಜ್ವಲತೆಯಿಂದ ಕೂಡಿದ್ದರೆ ನಾಯಕಿ ಸುಗುಣಳ ಪ್ರೀತಿ ,ದ್ವೇಷ, ಅಸೂಯೆ, ಈರ್ಷೆ, ಪ್ರತಿಕಾರದ ರೂಪವಾಗಿ ಮೈತಾಳುತ್ತದೆ. ಛಾಯಳ ಪ್ರೀತಿ ಸ್ವಾರ್ಥವಾಗಿ ಕಂಡುಬರುತ್ತದೆ. ಆನಂದ ತನ್ನ ಪ್ರೇಯಸಿಗಾಗಿ ಸಧಾಕರನಲ್ಲಿ ಪಾರಿವಾಳತರುವು, ಹುಲಿಯ ಕೊರಳ ಪಟ್ಟಿ ತರುವುದನ್ನು ನೋಡಿದಾಗ ಪ್ರೀತಿಯ ಶಕ್ತಿ ಎಂತಹದ್ದು ಎಂಬುದು ಮನನವಾಗುತ್ತದೆ. ಇದರ ವಿರುದ್ಧ ದಿಕ್ಕಿನಲ್ಲಿರುವ ಸುಗುಣಾ ಬೇಡವಾದ ಪ್ರೀತಿಗೆ ಪ್ರಾಣಕೊಡಲು ಸಿದ್ದಳಾಗಿದ್ದಲ್ಲದೆ ಪುಟ್ಟ ಸಾವಿಗೆ ಕಾರಣವಾಗುತ್ತಾಳೆ. ಇದೊಂದು ವಿಷಾದ ಪ್ರೀತಿ. ಪುಟ್ಟಿಯ ಸಾವಿನಿಂದ ಆನಂದ ಜೀವನದಲ್ಲಿ ಜಿಗುಪ್ಪೆಗೊಂಡು ಸನ್ಯಾಸ ದೀಕ್ಷೆಪಡೆಯುವ ಸನ್ನಿವೇಶ ಬದುಕಿನ ಕನ್ನಡಿಯಾಗಿದೆ. ಸುಗುಣಳಿಗಾಗಿ ಬೆಳೆದ ೧೨ ಎಕರೆಯಲ್ಲಿನ ಹೂ ಮಾರದೆ ಅವಳಿಗಾಗಿ ಮೀಸಲಿಡುವ ಮನಸ್ಸು, ಕೊನೆಗೂ ಹೂದೋಟ ತೋರಿಸಿ ಆನಂದಿಸಿದ ಕ್ಷಣ ಶೃಂಗಾರ ರಸದ ಪಡಿಯಚ್ಚು. 26 ಭಾಗಗಳಿಂದ ಕೂಡಿದ ಈ ಕಾದಂಬರಿ ಪ್ರೀತಿಯಷ್ಟೆಯಲ್ಲದೆ ಸಮಾಜದಲ್ಲಿಯ ಕಂದಾಚಾರದ ಮತ್ತು ಕೊಳಕು ವಿಚಾರಗಳನ್ನು ಫಕೀರಸಾಬ ಮತ್ತು ಅವನ ನಾಯಿಗಳ ಮೂಲಕ ಕಾದಂಬರಿಕಾರ ಸಮಾಜಕ್ಕೆ ಪರಿಚಯಿಸುತ್ತಾರೆ. ಇದಲ್ಲದೆ ಶಿಕ್ಷೆಗೊಳಗಾಗಿ ಜೈಲು ಸೇರಿದ ಸುಧಾಕರ ಸುಗುಣಳನ್ನು ಪಡೆಯಲು ಮಠಕ್ಕೆ ಆಗಮಿಸಿ ಅಲ್ಲಿಯ ಜನರನ್ನು ತನ್ನ ಪಿಸ್ತೂಲಿನ ಮೂಲಕ ಎದುರಿಸುವ ಪರಿ, ಅದಕ್ಕೆ ಉತ್ತರವಾಗಿ ಆತನಿಂದ ಶೋಷಣೆಗೊಳಪಟ್ಟ ಛಾಯ ಹಾವನ್ನು ಅವನ ಮೇಲೆ ಎಸೆಯುವ ರೀತಿ ಇವುಗಳು ಪ್ರಸ್ತುತ ಜಗತ್ತಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟೆಲ್ಲಾ ಆವಂತರ ಮಾಡಿದ ಸುಧಾಕರನ್ನು ಕ್ಷಮಿಸಿ ಮನುಷ್ಯನನ್ನಾಗಿ ಮಾಡುವ ಆನಂದನ ಹೃದಯ ಶ್ರೀಮಂತಿಕೆ ಅದ್ಭುತವಾಗಿ ಮೂಡಿಬಂದಿದೆ.
ಕೊಟ್ನೆಕಲ್ ವೆಂಕೋಬ ಅವರು ರಾಯಚೂರಿನ ಮಾನವಿ ತಾಲೂಕಿನ ಕೊಟ್ನೆಕಲ್‌ನವರು. ತಂದೆ ವೀರಣ್ಣ ತಾಯಿ ಜ್ಞಾನಮ್ಮ . ಭೀಮಾರಾಯನ ಗುಡಿಯಲ್ಲಿ ನೀರಾವರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಾರಾಗಿ ಮತ್ತು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಶಸ್ತಿಗಳು: ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಕರ್ನಾಟಕ ಚೇತನ ಪ್ರಶಸ್ತಿ ಕೃತಿಗಳು: ಅಪರಾಧಿ ಯಾರು, ಅಪರಂಜಿ, ಪ್ರೇಮ ಪಲಕ್ಕಿ, ಸಗರನಾಡಿನ ವೈದ್ಯ ಸುಪುತ್ರ,ಕೆರೆಯ ನೀರನ್ನು ಕೆರೆಗೆ ಚೆಲ್ಲಿ ,ಅರಿವಿನ ಅರವತ್ತು ಕಥೆಗಳು, ಭಾರತ ಮಾತಾ ಕಿ ಜೈ, ಬಾಳಿಗೆ ಬೆಳಕು, ಪ್ರೀತಿಯ ಕೂಗು ,ಓ ಅಮ್ಮಾ ನೀ ನೆಲ್ಲಿರುವೆ ...
READ MORE