“ನೀನೇ ವಸಂತ ನಾನೇ ಕೋಗಿಲೆ' ಲೇಖಕಿ ಎಂ.ರತ್ನ ಅವರು ಬರೆದ ಮೊದಲ ಕಾದಂಬರಿ. ಮನಸ್ಸಿನಲ್ಲಿ ಹುಟ್ಟು ಹಾಕಿದ ಜೀವಂತ ಘಟನೆಯೊಂದು ಸುಮಾರು ದಿನಗಳವರೆಗೂ ಸ್ಮೃತಿ ಪಟಲದಲ್ಲಿ ಇದ್ದುದೇ ಕಾದಂಬರಿಯ ಪಾತ್ರ ರಚನೆಗೆ ನಾಂದಿ ಯಾಯಿತು ಎನ್ನುತ್ತಾರೆ ಲೇಖಕಿ ರತ್ನ. ಜೊತೆಗೆ ಕೃತಿಯಲ್ಲಿ ವ್ಯಕ್ತಿಗಳ ಕಲ್ಪನೆಗಿಂತ ವಾಸ್ತವಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ ಎನ್ನುತ್ತಾರೆ. ಕಾದಂಬರಿ ಬರೆಯುವಾಗ ಪಾತ್ರಗಳು ತೀರಾ ವಾಚಾಳಿಯಾಗಿಸುವ, ವ್ಯಾಖ್ಯಾನ ಆಗಿಸದೆ ಕಥೆಯ ಮಿತಿಗಳನ್ನು ಸೂಕ್ಷ್ಮವಾಗಿ ಹಿಗ್ಗಿಸಿ, ಕಾದಂಬರಿ ಸ್ವರೂಪಕ್ಕೆ ಮೆರಗು ನೀಡಿದ್ದಾರೆ.