ಲೇಖಕ, ಪ್ರಕಾಶಕ ಮಹೇಶ್ ಆರ್. ನಾಯಕ್ ಅವರ ಐತಿಹಾಸಿಕ ಕಾದಂಬರಿ ಅಶ್ವಾರೂಢ. ಐತಿಹಾಸಿಕ ಹಿನ್ನಲೆಯುಳ್ಳ ಈ ಕಾದಂಬರಿಯ ಮೂಲ ವಸ್ತುವೇ ಅಶ್ವಾರೂಢವೆಂಬ ಕಲ್ಲು.ಈ ಕಲ್ಲಿನ ಹಿನ್ನಲೆಯನ್ನು ಕಲ್ಲಿನ ವಾರಸುದಾರರಾದ ಹರಿನಾರಾಯಣ ಭಟ್ಟರಲ್ಲಿ ನೂರಾರು ಮಂದಿ ಕೇಳಿದ್ದುಂಟು. ನ್ಯೂಸ್ ಪೇಪರ್ ನವರು,ಟಿವಿ ಮಾದ್ಯಮದವರು,ವಿದೇಶದಿಂದ ಬಂದವರು ಹೀಗೆ ಕೇಳಿದವರಿಗೆಲ್ಲಾ, 2-3 ಕೆಜಿ ಭಾರದ, ಕುದುರೆಯ ಮುಖವನ್ನು ಹೊಂದಿದ ಈ ಕಲ್ಲಿನ ಬಗ್ಗೆ ಹೇಳಿ ಹೇಳಿ ಸಂತೋಷ-ಬೇಸರ ಎರಡೂ ಆಗಿದೆ ಭಟ್ಟರಿಗೆ .ಈ ಕಲ್ಲಿನ ಹಿನ್ನೆಲೆಯ ಬಗ್ಗೆ ತಿಳಿಸಬೇಕೆಂದರೆ ಶ್ರೀನಿವಾಸ ಭಟ್ಟರ ಮರಿ ಮೊಮ್ಮಗ ಹರಿನಾರಾಯಣ ಭಟ್ಟರ ದೇವರ ಕೋಣೆಯಲ್ಲಿ ಆಸೀನವಾಗಿರುವ ಈ ಕುದುರೆಯ ಮುಖದ ಕಲ್ಲು ,ಹರಿನಾರಾಯಣ ಭಟ್ಟರಿಗೆ ತಿಳಿದ ಪ್ರಕಾರ ಕೆಳದಿ ರಾಜರ ಕಾಲದ ಕಲ್ಲು ಅದು.ಹೀಗೆಂದು ಹರಿನಾರಾಯ ಭಟ್ಟರಿಗೆ ಅವರ ಅಜ್ಜ,ಮುತ್ತಜ್ಜ ತಿಳಿಸಿದ್ದರು.ಕೆಳದಿಯ ವೀರಭದ್ರ ದೇವಸ್ಥಾನದೊಳಗೆ,ನಾಗನ ಹೆಡೆಯ ಕೆಳಗೆ ಇದ್ದ ಕಲ್ಲುಅದು.ಹರಿನಾರಾಯಣಭಟ್ಟರ ಮುತ್ತಜ್ಜಿಯ ಮನೆತನದವರು ಆ ಮಂದಿರದಲ್ಲಿ ಪೂಜೆ ಮಾಡುತ್ತಿದ್ದವರು.ಮುಂದೆ ಕೃಷ್ಣದೇವರಾಯರ ಕಾಲದಲ್ಲಿ ಯುದ್ಧ ನಡೆದಾಗ ವಿಜಯನಗರ ಸಂಪೂರ್ಣ ಸೋತು ಹೋಗುತ್ತಿರುವ ಸಂಧರ್ಭದಲ್ಲಿ ಯಾರೋ ಒಬ್ಬ ಹೆಂಗಸು ಯಾರಿಗೂ ಗೊತ್ತಾಗದ ಹಾಗೆ ಆ ಅಶ್ವಾರೂಢ ಕಲ್ಲನ್ನು ಸೀರೆಯೊಳಗೆ ಬಚ್ಚಿಟ್ಟು ,ಹರಿನಾರಾಯಣಭಟ್ಟರ ಅಜ್ಜಿಯ ಕೈಯಲ್ಲಿ ಕೊಟ್ಟರಂತೆ,ಆ ಮೂಲಕ ಈ ಕಲ್ಲು ಹರಿನಾರಾಯಣಭಟ್ಟರ ಮನೆಯಲ್ಲಿ ಶಾಶ್ವತವಾಗಿ ನೆಲೆನಿಂತಿತು.ವರುಷಕ್ಕೊಮ್ಮೆ ಪತ್ತನಾಜೆಯ ದಿನ ಆ ಕಲ್ಲಿಗೆ ಸಂಭ್ರಮದಿಂದ "ಹೌದರಾಯನ" ಪೂಜೆ ಮಾಡುತ್ತಾ ಬರುತ್ತಿದ್ದರು ಹರಿನಾರಾಯಣಭಟ್ಟರು.ಈ ಎಲ್ಲ ವಿಷಯವನ್ನು ಇತ್ತೀಚೆಗೆ ಅವರು ಮತ್ತೊಮ್ಮೆ ಹೇಳಿದ್ದು , ಮನೋಹರ್ ಅಲಿಯಾಸ್ ಮನು... ಎಂಬ ಯುವಕನಿಗೆ.ಕರ್ನಾಟಕದ ಕಲ್ಲುಗಳ ಬಗ್ಗೆ ಪಿ.ಎಚ್.ಡಿ ಮಾಡುತ್ತಾ, ಜೊತೆಗೆ ಸಿನಿಮಾದಲ್ಲಿ ನಟನಾಗಬೇಕೆಂದು ತೀವ್ರ ಪ್ರಯತ್ನ ಪಡುತ್ತಿರುವ ಕೊಂಕಣಿ ಯುವಕ ಮನೋಹರ್. ಹೀಗೆ ಕಾದಂಬರಿ ಸಾಗುತ್ತದೆ.
ಮಹೇಶ್ ಆರ್. ನಾಯಕ್ ಅವರು ಕಲ್ಲಚ್ಚು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಕಡಲತಡಿಯ ಸಾಹಿತ್ಯ ಲೋಕದ ಸರಿಸುಮಾರು ಮೂರು ದಶಕಗಳಿಂದ ಕೇಳಿ ಬರುವ ಇವರ ಹೆಸರು, ವಿಶೇಷವಾಗಿ ಸಣ್ಣಕಥಾ ರಚನೆ ಹಾಗೂ ಇತರ ಹೆಚ್ಚಿನ ಪ್ರಕಾರಗಳಲ್ಲೂ ಬರೆದು ಸೈ ಎನ್ನಿಸಿಕೊಂಡಿದ್ದಾರೆ. 21 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರಗಳ ಮೂಲಕ ಸಕ್ರಿಯವಾಗಿರುವ "ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು. ಈವರೆಗೆ ಸ್ವರಚಿತ 18 ಮತ್ತು ಕಲ್ಲಚ್ಚು ಪ್ರಕಾಶನದ ನೆಲೆಯಲ್ಲಿ 48 ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ನೂರಾರು ಸಾಹಿತ್ಯಪರ ಗೋಷ್ಠಿಗಳಲ್ಲಿ ವಿವಿಧ ನೆಲೆಗಳಿಂದ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ...
READ MORE