ಕಾದಂಬರಿಯಲ್ಲಿ ಮಲೆನಾಡಿನ ನೈಸರ್ಗಿಕ ವರ್ಣನೆಯ ಅನುಭವ ನೀಡುವ ಲೇಖಕಿ ಎಂ.ಕೆ. ಇಂದಿರಾ ಅವರ ಕಾದಂಬರಿ-ಹೆಣ್ಣಿನ ಆಕಾಂಕ್ಷೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಆಕಾಂಕ್ಷೆ ಈಡೇರಿಸಿಕೊಳ್ಳುವುದೇ ಒಂದು ಸವಾಲು. ಅದನ್ನು ಸಾಧಿಸಿದ ಬಗೆ, ಎದುರಿಸಿದ ಕಷ್ಟಗಳು, ಅವಮಾನಗಳು ಇಂತಹ ವಸ್ತುಗಳನ್ನು ಹೊಂದಿರುವ ಕೃತಿ ಇದು. ಬಹುತೇಕ ಹೆಣ್ಣುಗಳ ಜೀವನದಲ್ಲಿ ಮದುವೆಯು ಸುಖಮಯವಾಗಿರುವುದಿಲ್ಲ. ಶೋಷಣೆಗೆ ಒಳಗಾಗುವುದು, ವಿಧವೆಯಾಗುವುದು, ಮಕ್ಕಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುವುದು, ಸಂಬಂಧಿಕರ ಟೀಕೆಗಳ ಹಿಂಸೆ, ಪತಿಯ ಉದಾಸೀನತೆ ಹೀಗೆ ಹತ್ತು ಹಲವು ಸಮಸ್ಯೆಗಳ ಹುತ್ತದಲ್ಲಿ ಅವರು ಉಸಿರುಗಟ್ಟಿ ಸಾಯುವಂತಿರುತ್ತದೆ. ಬಹುತೇಕ ವೇಳೆ, ಕಂಗಾಲಾದ ಅವರ ಬದುಕು ಸತ್ತಂತೆಯೇ ಇರುತ್ತದೆ. ಒಂದೊಂದು ಸ್ಥಿತಿಯ ಪರಿಯನ್ನು ಒಬ್ಬೊಬ್ಬ ಪಾತ್ರಧಾರಿ ಹೆಣ್ಣಿನ ಸಂಸಾರದ ಚಿತ್ರಣಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟ ಕಾದಂಬರಿ ಇದು. ಜೊತೆಗೆ, ಪುರುಷ ಪ್ರಧಾನ ಸಮಾಜದ ದಟ್ಟ ಚಿತ್ರಣವೂ ಕಾಣಬಹುದು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ 2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...
READ MORE