'ಜವನಕ್ಕ’ ಎನ್. ಬೋರಲಿಂಗಯ್ಯ ಅವರ ಕಾದಂಬರಿಯಾಗಿದೆ. ನೆಲ ಸಂಸ್ಕೃತಿಯ ಒಳ್ಳೆಯತನಗಳು ಕಣ್ಮರೆಯಾಗಿ ಪ್ರತಿಯೊಂದೂ ತನಗೆ ಬೇಕೆಂಬ ದಾಹ ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ಕಾದಂಬರಿಯ ಮುಖ್ಯಪಾತ್ರ ಜವನಕ್ಕೆ ಮಾದರಿಯಾಗಬಲ್ಲಳು ಎಂಬುವುದನ್ನು ತಿಳಿಸುತ್ತದೆ. ಗ್ರಾಮ ಸಮುದಾಯದ ಕುಟುಂಬಗಳು, ತಮ್ಮ ಪಾಲಿಗೆ ಬಂದ ಭೂಮಿ ಕಾಣಿಯನ್ನೇ ನಂಬಿಕೊಂಡು ದುರಾಸೆಯಿಲ್ಲದೆ, ಬದುಕುತ್ತಿದ್ದ ರೀತಿ, ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಬುದ್ದಿಹೇಳುವ ಹಿರಿಯರು, ಸಮಾಜದಲ್ಲಿನ ಅಶಕ್ತ, ಅಬಲಿ, ಬಡವರನ್ನು ಲೆಕ್ಕಾಚಾರಗಳಿಲ್ಲದೆ ಸಂಭಾಳಿಸಿಕೊಂಡು ಹೋಗುತ್ತಿದ್ದುದು - ಓಹ್, ಇದನ್ನೇ ಅಲ್ಲವೇ ನಾವಿಂದು ಬಯಸುತ್ತಿರುವುದು ? ಪತನಗೊಂಡ ನೈತಿಕ ಮೌಲ್ಯಗಳನ್ನು ನಾವು ಹುಡುಕುವುದು ಇಂಥ ತಳಹದಿಯಲ್ಲೇ ಅಲ್ಲವೆ ? ನಾವೇಕೆ ಅಂದು ನಮ್ಮದಲ್ಲದ, ನಮಗೆಟುಕದ, ನಮಗವಶ್ಯವೇ ಇಲ್ಲದ ಯಾವುದೋ ಒಂದನ್ನು ಹಿಂಬಾಲಿಸಿ ನೆಮ್ಮದಿ ಕಳೆದುಕೊಂಡೆವು ? ಈ ಕಾದಂಬರಿಯನ್ನೋದುವಾಗ ಇಂಥ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುತ್ತೇವೆ.
(ಹೊಸತು, ಆಗಸ್ಟ್ 2012, ಪುಸ್ತಕದ ಪರಿಚಯ)
ಇಂದಿನ ನಮ್ಮ ಬದುಕಿನ ರೀತಿನೀತಿಗಳು ಶೀಘ್ರಗತಿಯಲ್ಲಿ - ಅಂದರೆ ಒಂದೆರಡು ತಲೆಮಾರಿನ ಅಂತರದಲ್ಲೇ ಸಂಪೂರ್ಣ ಬದಲಾಗಿದ್ದು ನಮ್ಮ ನಡವಳಿಕೆಯಿಂದ ತಿಳಿಯುತ್ತದೆ. ಕಣ್ಣಿಗೆ ರಾಚುವಂತೆ ಸಕಲವೂ ಪರಿವರ್ತನೆಗೊಂಡುದು ಏಕೆಂಬ ಪ್ರಶ್ನೆಗೆ ವಿಜ್ಞಾನ - ತಂತ್ರಜ್ಞಾನ - ನಾಗರಿಕತೆ ಮುಂತಾದ ಹಲವು ಹತ್ತು ಉತ್ತರಗಳು ಸಿಕ್ಕಾವು. ನೆಲ ಸಂಸ್ಕೃತಿಯ ಒಳ್ಳೆಯತನಗಳು ಕಣ್ಮರೆಯಾಗಿ ಪ್ರತಿಯೊಂದೂ ತನಗೆ ಬೇಕೆಂಬ ದಾಹ ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ಕಾದಂಬರಿಯ ಮುಖ್ಯಪಾತ್ರ ಜವನಕ್ಕೆ ಮಾದರಿಯಾಗಬಲ್ಲಳು. ಗ್ರಾಮ ಸಮುದಾಯದ ಕುಟುಂಬಗಳು, ತಮ್ಮ ಪಾಲಿಗೆ ಬಂದ ಭೂಮಿ ಕಾಣಿಯನ್ನೇ ನಂಬಿಕೊಂಡು ದುರಾಸೆಯಿಲ್ಲದೆ, ಬದುಕುತ್ತಿದ್ದ ರೀತಿ, ಯಾರಾದರೂ ದಾರಿ ತಪ್ಪಿ ನಡೆಯುತ್ತಿದ್ದರೆ ಬುದ್ದಿಹೇಳುವ ಹಿರಿಯರು, ಸಮಾಜದಲ್ಲಿನ ಆಶಕ್ತ, ಆಬಲಿ, ಬಡವರನ್ನು ಲೆಕ್ಕಾಚಾರಗಳಿಲ್ಲದೆ ಸಂಭಾಳಿಸಿಕೊಂಡು ಹೋಗುತ್ತಿದ್ದುದು - ಓಹ್, ಇದನ್ನೇ ಅಲ್ಲವೇ ನಾವಿಂದು ಬಯಸುತ್ತಿರುವುದು ? ಪತನಗೊಂಡ ನೈತಿಕ ಮೌಲ್ಯಗಳನ್ನು ನಾವು ಹುಡುಕುವುದು ಇಂಥ ತಳಹದಿಯಲ್ಲೇ ಅಲ್ಲವೆ ? ನಾವೇಕೆ ಅಂದು ನಮ್ಮದಲ್ಲದ, ನಮಗೆಟುಕದ, ನಮಗವಶ್ಯವೇ ಇಲ್ಲದ ಯಾವುದೋ ಒಂದನ್ನು ಹಿಂಬಾಲಿಸಿ ನೆಮ್ಮದಿ ಕಳೆದುಕೊಂಡೆವು ? ಈ ಕಾದಂಬರಿಯನ್ನೋದುವಾಗ ಇಂಥ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುತ್ತೇವೆ. ಇಂದಿನ ತಂತ್ರಜ್ಞಾನ ನಮ್ಮ ಪ್ರಪಂಚವನ್ನೇ ಬದಲಿಸಿಬಿಡುವಷ್ಟು ಶಕ್ತವಾಗಿದೆ. ಜೊತೆಗೆ ಆತನನ್ನು ಸುಖದ ಸಾಮ್ರಾಜ್ಯಕ್ಕೆ ಎಳೆದಿದೆ. ಎಚ್ಚರ ತಪ್ಪಿ ಬಳಸಿದ್ದರಿಂದ ವಿನಾಶಕ್ಕೂ ಎಳೆದಿದೆ.