‘ಚಂದ್ರಗುಪ್ತ ಮೌರ್ಯ’ ಕೃತಿಯು ಉದಯಕುಮಾರ ಹಬ್ಬು ಅವರ ಕನ್ನಡ ಅನುವಾದಿತ ಕೃತಿಯಾಗಿದ್ದು, ಹೀಲ್ಡಾ ಮ್ಯಾಕ್ ಡೋವೆಲ್ ಸೆಲಿಗ್ಮೆನ್ ಮೂಲ ಲೇಖಕಿಯಾಗಿದ್ದಾರೆ. ಚಂದ್ರಗುಪ್ತ ಮೌರ್ಯನ ಬಾಲ್ಯದ ಜೀವನ ಹಾಗೂ ಆತ ಬೆಳದು ಬಂದ ರೀತಿಯನ್ನು ಇಲ್ಲಿ ದಾಖಲಿಸಲಾಗಿದೆ. ಹಿಮವಂತ ರಾಜ್ಯದ ರಾಜ ಹಿಮವಂತ ಯುದ್ಧದಲ್ಲಿ ನಂದರಿಂದ ಮೃತಪಟ್ಟು, ಮುರಾ ಚಂದ್ರಗುಪ್ತ ಮೌರ್ಯನನ್ನು ಕಾಡಿನಲ್ಲಿ ಬಿಟ್ಟು ಹೋಗುವ ಪರಿ, ನಂತರದಲ್ಲಿ ಆತ ಕುರಿಗಾಹಿ ಕುಟುಂಬದಲ್ಲಿ ಬೆಳೆಯುವಂತಹ ಕತೆಯನ್ನು ಇಲ್ಲಿ ವಿವರಿಸಲಾಗಿದೆ. ಕುರಿಕಾಯುವವರ ಪಾಲನೆ ಪೋಷಣೆಯಲ್ಲಿ ಬೆಳೆದು ಸಕಲ ವಿದ್ಯಾಪರಂಗತನಾಗಿ, ಪ್ರಾಣಿಗಳ ಭಾಷೆಯನ್ನು ಕಲಿತು ನಂದರ ಸವಾಲಿಗೆ ಕೊರಳೊಡ್ಡಿ ಜಯಶಾಲಿಯಾಗಿ, ನಂದರ ಕುತಂತ್ರವನ್ನು ದಮಣಿಸಿ ತಾನು ಮಗಧ ವಂಶದ ರಾಜ ಎನ್ನುವ ಸತ್ಯವನ್ನು ತಿಳಿಸುತ್ತಾನೆ. ನಂತರದಲ್ಲಿ ಚಾಣಕ್ಯನನ್ನು ಸಾರ್ಥರ ಹಾದಿಯಲ್ಲಿ ಭೇಟಿಯಾಗಿ ಪರಸ್ಪರ ಕೊಂಡು ಕೊಳುವಿಕೆಯಿಂದ ಒಂದು ಬಲಿಷ್ಟ ರಾಜ್ಯವನ್ನು ಕಟ್ಟುವ ಕನಸ್ಸನ್ನು ನನಸ್ಸಾಗಿಸಿ, ಚಾಣಕ್ಯನ ಸಾಹಯದಿಂದ ಮಗಧವನ್ನು ಆಕ್ರಮಿಸಿ ಜಯಶಾಲಿಯಾಗಿ ರಾಜ್ಯನಾಗುತ್ತಾನೆ. ಬಲಿಷ್ಟ ಮೌರ್ಯ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಹೀಗೆ 24 ವರ್ಷಗಳ ಕಾಲ ರಾಜ್ಯಭಾರ ನಡೆಸುವ ಚಂದ್ರ ಗುಪ್ತನು ರಾಜ್ಯದ ಹೊಣೆಗಾರಿಕೆಯನ್ನು ಬಿಂದುಸಾರನಿಗೆ ಒಪ್ಪಿಸಿ, ಶ್ರವಣಬೆಳಗೊಳಕ್ಕೆ ಹೋಗಿ ಅಲ್ಲಿ ಜೈನದೀಕ್ಷೆ ಪಡೆದು ಜೈನ ಮುನಿಯಾದ. ಇದಿಷ್ಟು ಕಾದಂಬರಿಯ ಸಾರಾಂಶವಾಗಿದೆ.
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...
READ MORE