ಕವಿ-ನಾಟಕಕಾರ ಚಂದ್ರಶೇಖರ ಕಂಬಾರ ಅವರ ಇತ್ತೀಚಿನ ಕಾದಂಬರಿ ’ಶಿವನ ಡಂಗುರ’. ಕಾದಂಬರಿ ಕುರಿತು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ’ಸಮಕಾಲೀನ ಬದುಕಿನ ತಲ್ಲಣಗಳನ್ನು ಹೀಗೆ ಮುಖಾಮುಖಿಯಾಗಿಸಿ ರಚನೆಯಾದ ಮತ್ತೊಂದು ಕೃತಿಯನ್ನು ನಾನು ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಇತರ ಭಾಷೆಗಳಲ್ಲೂ ಕಂಡಿಲ್ಲ. ಕಂಬಾರರನ್ನು ಓದುವಾಗ ಇಳಂಗೋಅಡಿ, ಅಚಿಬೆ, ಪೋಯೆಂಕಾ, ಮಾರ್‌ಕೆಸ್ ಮೊದಲಾದವರ ಜೊತೆ ಹೋಲಿಸುವ ಉತ್ಸಾಹ ಮೂಡುತ್ತದೆ. ಆದರೆ ಇವರೆಲ್ಲರಿಗಿಂತ ಭಿನ್ನರಾದ ಕಂಬಾರರಿಗೆ ನಮ್ಮ ಜಾನಪದ ಜಗತ್ತು ಮೂಲ ಪ್ರೇರಣೆ. ಜನಪದರ ಸೃಜನಶೀಲತೆಯ ಬಗ್ಗೆ ಕಂಬಾರರಿಗೆ ಅಪಾರ ವಿಶ್ವಾಸ. ಈ ದೃಷ್ಟಿಯಿಂದ 'ಶಿವನ ಡಂಗುರ' ಒಂದು ವಿಶಿಷ್ಟ ಕೃತಿ, ಮಾತ್ರವಲ್ಲ, ಹೊಸ ದರ್ಶನ ನೀಡುವ ಮಹತ್ವದ ಕಾದಂಬರಿ’ ಎಂದು ವಿಶ್ಲೇಷಿಸಿದ್ದಾರೆ.
ಕೃಷ್ಣ ಮನವಳ್ಳಿ ಅವರು ’ಈ ಕಾದಂಬರಿಯ ಕಥನ ವಾಸ್ತವಿಕತೆಯಿಂದ ಮಿಥ್ ಶೈಲಿಗೆ, ಮಿಥ್‌ನಿಂದ ವಾಸ್ತವಿಕತೆಯತ್ತ ಬದಲಾಗುತ್ತಾ ಹೋಗುತ್ತದೆ. ಮತ್ತು ಇತಿಹಾಸದ ನೇರ ನಡೆ, “ಪ್ರಗತಿಶೀಲ ಗಮನ” ಇತ್ಯಾದಿ ಮಾತುಗಾರಿಕೆಯ ಮಾಯೆಯನ್ನು ಅಲ್ಲಗೆಳೆದು, ನಮ್ಮ ಈ ಮೂರನೇ ಜಗತ್ತಿನ ಸಣ್ಣ ಪುಟ್ಟ ಊರು ಹಳ್ಳಿಗಳಲ್ಲೂ ಹೇಗೆ ಜಾಗತಿಕ ಹಾಗೂ ಹೊಸ-ವಸಾಹತುಶಾಹಿ ಸಾಮ್ರಾಜ್ಯ ಹರಡುತ್ತಾ ಹೊರಟಿದೆ ಅನ್ನುವ ಕಹಿನಿಜವನ್ನು ಎತ್ತಿ ತೋರಿಸುತ್ತದೆ’ ಎಂದು ವಿವರಿಸುತ್ತಾರೆ.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE