ಆಡಿಸಿದಳು ಜಗದೋದ್ಧಾರನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 200

₹ 50.00




Year of Publication: 1996
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

`ಆಡಿಸಿದಳು ಜಗದೋದ್ಧಾರನ' ಸಾಯಿಸುತೆ ಅವರ ಕೃತಿಯಾಗಿದೆ. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ " ಎಂಬ ಸುಭಾಷಿತದಂತೆ ತಾಯಿ ನಮ್ಮ ಸಂಸ್ಕೃತಿಯಲ್ಲಿ ಅತಿ ಉನ್ನತ ಸ್ಥಾನ ಪಡೆದಿದ್ದಾಳೆ. ಜನಪ್ರಿಯ ಲೇಖಕಿ ಸಾಯಿಸುತೆಯವರ ಈ ಕಾದಂಬರಿ ನನಗೆ 'ಸಂಗೀತ ಸಾಹಿತ್ಯ' ಅಭಿಯಾನದಲ್ಲಿ ನಮ್ಮ ನೆಚ್ಚಿನ ವೀಣಾ ಮೇಡಂ ಅವರಿಂದ ಬಹುಮಾನವಾಗಿ ದೊರಕಿತ್ತು. ಇಂದಿನ ದಿನಕ್ಕೆ ಪರಿಚಯಿಸಲು ಬಹಳ ಅರ್ಥಪೂರ್ಣವಾಗಿದೆ ಎಂದು ಆರಿಸಿಕೊಂಡೆ. ನಿನ್ನೆ ಇದನ್ನು ಓದುತ್ತಿರುವಾಗ ಹೀಗೂ ಉಂಟೆ ಎಂಬ ಭಾವ, ಒಂದು ರೀತಿಯ ದಿಗ್ಭ್ರಮೆ ಮನವನ್ನಾವರಿಸಿದ್ದು ಸುಳ್ಳಲ್ಲ. ಶ್ರೀ ಶಂಕರಾಚಾರ್ಯರು "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " ಎಂದು ತಾಯಿಯ ಅಂತಃಕರಣವನ್ನು ತೆರೆದಿಟ್ಟಿದ್ದಾರೆ. ಆದರೆ ಇಲ್ಲಿ ನಾಗರೀಕತೆಯ ಮುಸುಕಿನಲ್ಲಿ ಬೀಸುತ್ತಿರುವ ಬದಲಾವಣೆಯ ಗಾಳಿ ಮುಂದಿನ ಯುವ ಪೀಳಿಗೆಯನ್ನು ಎತ್ತ ಕೊಂಡೊಯ್ಯಬಹುದೆಂಬ ಚಿತ್ರಣವನ್ನು ಲೇಖಕಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಅವರು ಬರೆದ ಸಮಯದಲ್ಲಿ ಶಶಿಯಂತಹ ಯುವತಿಯರು ಅಪರೂಪವಾಗಿದ್ದರೂ ಈಗ ಇವರ ಸಂಖ್ಯೆ ಹೆಚ್ಚುತ್ತಿದೆ ಎನಿಸಿತು.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...

READ MORE

Related Books