ಖ್ಯಾತ ಲೇಖಕ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಪೌರಾಣಿಕ ಕಾದಂಬರಿ-ಉರ್ವಶೀ ಪುರೂರವ. ಮಹಾಭಾರತ ಕಥಾ ಪೂರ್ವಕಾಂಡದ ಭಾಗ-2ರ ವಂಶಾವಳಿ (1) ಕಥಾ ವಸ್ತು ಒಳಗೊಂಡಿದೆ. ಲೇಖಕರು ಹೇಳುವಂತೆ ‘ಭೀಷ್ಮರ ಜನನ ವೃತ್ತಾಂತವೂ ಇದೆ. ಸತ್ಯವತಿಯ ಪರಾಶರರಿಂದ ಜನಿಸಿದ ವ್ಯಾಸರ ಕಥೆಯೂ ಇದೆ. ಭರತ, ವಿಶ್ವಾಮಿತ್ರ, ಶಾಕುಂತಲೆಯ ಕಥೆಯೂ, ಯಯಾತಿ, ಯದು, ಪುರ ಇತರರ ಕಥೆಯೂ ಇದೆ. ಅಗಸ್ತ್ಯರ ವೃತ್ತಾಂತ, ವಶಿಷ್ಠ, ಜಮದಗ್ನಿ, ಪರಶುರಾಮ, ಬ್ರಹ್ಮ-ಕ್ಷತ್ರ ಹೀಗೆ ತಾಕಲಾಟಗಳೂ ಇವೆ. ಎಲ್ಲವನ್ನೂ ಏಕಕಾಲಕ್ಕೆ ಹೇಳಲು, ಬರೆಯಲು ಸಾಧ್ಯವಿಲ್ಲ. ಎಳೆಎಳೆಯಾಗಿ ಬಿಡಿಸಿ ಬರೆಯಲೇ ಬೇಕಾದ ಕ್ಲಿಷ್ಟತೆ ಇದೆ. ಮೊದಲು ಊರ್ವಶೀ-ಪುರೂರವ ವೃತ್ತಾಂತವು ಋಗ್ವೇದೋಕ್ತವಾದುದು. ಮರ್ಮಗಳ ಸಹಿತ ವಿವರಿಸಲಾಗಿದೆ. ಕಥೆಯ ರೀತಿಯು ಕಾದಂಬರಿಯಂತೆ ಅನೇಕ ರೀತಿಯಲ್ಲಿ ಹರಿದಿದೆ’ ಎಂದು ಅಭಿಪ್ರಾಯಪಡುತ್ತಾರೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE