‘ಹೊರಳು ದಾರಿ’ ಕೃತಿಯು ಎನ್.ವಿ. ಅಂಬಾಮಣಿ ಮೂರ್ತಿ ಅವರ ವೈಚಾರಿಕ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿ ವೈಚಾರಿಕ ಆಚರಣೆಗಳ ಕುರಿತು ಹಲವು ವಿಚಾರಗಳನ್ನು ದಾಖಲಿಸಲಾಗಿದೆ. ಪರಂಪರೆಯ ಮೌಡ್ಯಗಳನ್ನು, ಕಂದಾಚಾರಗಳ ಪಾಲಿಸುವುದರಲ್ಲಿ ಹಾಗೂ ಮುಂದಿನ ಪೀಳಿಗೆಗೆ ರವಾನಿಸುವುದರಲ್ಲಿ ಪುರುಷರಿಗಿಂತ ಸ್ತ್ರೀಯರ ಪಾತ್ರ ಹೆಚ್ಚು ವೈಚಾರಿಕತೆ, ಹಾಗೂ ಆಧುನಿಕ ಸಮಾಜದ ಬಗ್ಗೆ ಅರಿವಿಲ್ಲದ ಸ್ತ್ರೀಯರು ಬಂಡಾಯ ಮನೋಧರ್ಮದವರಲ್ಲ ಎಲ್ಲವನ್ನೂ ಸಹಿಸುವ, ಅನುಸರಿಸುವ ಸೌಮ್ಯವಾದಿಗಳೆಂದು ಜರಿಯುವವರಿಗೆ ಅಂಬಾಮಣಿಯವರ ಹೊರಳುದಾರಿ ಕೃತಿಯಲ್ಲಿನ ವೈಜಾರಿಕ ಹಾಗೂ ಚಿಂತನಶೀಲ ಬರಹಗಳು ಅಪವಾದವೆಂಬಂತೆ, ಎಲ್ಲಾ ಆರೋಪಗಳನ್ನು ತಿರಸ್ಕರಿಸುವಂತೆ ಮೂಡಿಬಂದಿದೆ.
ಬರಹಗಾತಿ ಅಂಬಾಮಣಿಮೂರ್ತಿ 1948 ಮೇ 17 ಹಾಸನದಲ್ಲಿ ಜನಿಸಿದರು. ತಂದೆ ನಾ.ಸೂ. ವೆಂಕಟಾಚಾರ್ಯ, ತಾಯಿ ಕೆ. ಎ. ನಾಗರತ್ನಮ್ಮ. 'ಅಮೆರಿಕಾದಲ್ಲಿ ಆರು ತಿಂಗಳು' (ಪ್ರವಾಸ ಕಥನ), ಶಿಲ್ಪಕಲಾರತ್ನ ನಾ.ಸೂ. ವೆಂಕಟಾಚಾರ್ಯ ಬದುಕು-ಸಾಧನೆ (ವ್ಯಕ್ತಿ ಚಿತ್ರಣ), ಮನದಾಳದ ಭಾವ (ಕವನ ಸಂಕಲನ). ’ಸಾಹಿತ್ಯ ಶಿರೋಮಣಿ’ ಎಂಬ ಪ್ರಶಸ್ತಿ ದೊರೆತಿದೆ. ...
READ MORE(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)
ಪರಂಪರೆಯ ಮೌಡ್ಯಗಳನ್ನು, ಕಂದಾಚಾರಗಳ ಪಾಲಿಸುವು ದರಲ್ಲಿ ಹಾಗೂ ಮುಂದಿನ ಪೀಳಿಗೆಗೆ ರವಾನಿಸುವುದರಲ್ಲಿ ಪುರುಷರಿಗಿಂತ ಸ್ತ್ರೀಯರ ಪಾತ್ರ ಹೆಚ್ಚು ವೈಚಾರಿಕತೆ, ಹಾಗೂ ಆಧುನಿಕ ಸಮಾಜದ ಬಗ್ಗೆ ಅರಿವಿಲ್ಲದ ಸ್ತ್ರೀಯರು ಬಂಡಾಯ ಮನೋಧರ್ಮದವರಲ್ಲ ಎಲ್ಲವನ್ನೂ ಸಹಿಸುವ, ಅನುಸರಿಸುವ ಸೌಮ್ಯವಾದಿಗಳೆಂದು ಜರಿಯುವವರಿಗೆ ಆಂಬಾಮಣಿಯವರ ಹೊರಳುದಾರಿ ಕೃತಿಯಲ್ಲಿನ ವೈಜಾರಿಕ ಹಾಗೂ ಚಿಂತನಶೀಲ ಬರಹಗಳು ಅಪವಾದವೆಂಬಂತೆ, ಎಲ್ಲಾ ಆರೋಪಗಳನ್ನು ತಿರಸ್ಕರಿಸುವಂತೆ ಮೂಡಿಬಂದಿದೆ. ಸಮಾಜದ ಕ೦ದಾಚಾರಗಳನ್ನು, ಮೌಢ ಆಚರಣೆಗಳನ್ನು, ಧರ್ಮ-ಜಾತಿಯ ಹೆಸರಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳನ್ನೂ, ಪ್ರಸ್ತುತ ಪ್ರಭುತ್ವಗಳ ಒಡೆದು ಆಳುವ ನೀತಿ ಗಳನ್ನು ಅವುಗಳ ಅಧಿಕಾರದಾಹವನ್ನೂ ಸಮಾಜವನ್ನು ವರ್ಣಾಶ್ರಮದ ಕೂಪದಲ್ಲೇ ಕೂಡಿಹಾಕಲು ಹವಣಿಸುತ್ತಿರುವ ಥೈರೋಹಿತಶಾಹಿಯ ಹುನ್ನಾರಗಳನ್ನೂ ಲೇಖಕಿ ಯಾವ ಮುಲಾಜಿಗೂ ಒಳಗಾಗದೆ ಝಾಡಿಸುತ್ತಾರೆ. ಸಂಕಲನದಲ್ಲಿನ ವ್ಯಕ್ತಿಚಿತ್ರಣದ ಲೇಖನಗಳೂ ಸಹ ಯಾವುದೇ ಹಿಡಿತಗಳಿಗೆ ಬಲಿಯಾಗದೆ ತುಂಬಾ ಮುಕ್ತವಾಗಿ ನಿರೂಪಿತವಾಗಿವೆ. ಯಾವುದೇ ವ್ಯಕ್ತಿ ಪುಸ್ತಕ, ಸಂಗತಿಯ ಬಗ್ಗೆ ಬರೆಯುತ್ತಿದ್ದರೂ ಅದು ಕೇವಲ ಅಯಾ ಸಂಗತಿಗೆ ಮಾತ್ರ ಸೀಮಿತವಾಗು ವುದಿಲ್ಲ. ಕೇಂದ್ರದ ಸುತ್ತ ಸುತ್ತಿದರೂ, ಅದರಾಚೆಗೂ ಇರುವ ಸಂಗತಿಗಳನ್ನು ಅನಾವರಣ ಮಾಡುತ್ತದೆ. ಸಮಕಾಲೀನ ಸಂಗತಿಗಳಾದ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ, ಪ್ರತಿಮೆಗಳ ಅನಾವರಣದ ಔಚಿತ್ಯವನ್ನು ಪ್ರಶ್ನಿಸುತ್ತಾರೆ.