ಸೂರ್ಯಾಸ್ತಮ

Author : ಡಿ ಎನ್. ಕೃಷ್ಣಮೂರ್ತಿ

Pages 200

₹ 30.00




Year of Publication: 1994
Published by: ಪುನಶ್ಚೇತನ ಪ್ರಕಾಶನ
Address: ದೊಡ್ಡಮಾರಗೌಡನಹಳ್ಳಿ, ಮೈಸೂರು ತಾಲ್ಲೂಕು, ಮೈಸೂರು -570026
Phone: 9008149968

Synopsys

ಕೃಷಿ ಪ್ರಧಾನವಾದ ಅಪ್ಪಟ ಹಳ್ಳಿಯ ಪರಿಸರದಲ್ಲಿ ಮೂಡಿರುವ ಈ ಕಾದಂಬರಿಯ ನಾಯಕ ಭೋಗೇಗೌಡ ನಿರಕ್ಷರಿಯಾದರೂ ಅವನ ಮನ: ಪರಿಪಾಕ ಅಸಾಮಾನ್ಯವಾದುದು. ತಬ್ಬಲಿಯಾದರೂ ಅಣ್ಣ ಅತ್ತಿಗೆಯ ವಾತ್ಸಲ್ಯದ ರಕ್ಷೆಯಲ್ಲಿ ಬೆಳೆದ, ಅಕ್ಷರ ವಿದ್ಯೆಯಿಂದ ವಂಚಿತನಾದರೂ ಅನುಭವದಿಂದ ಹೃದಯ ಸಂಸ್ಕಾರವನ್ನು ಪಡೆದಿದ್ದ. ಬಡವನಾದರೂ ಸ್ವಬುದ್ಧಿ ಸ್ವಶ್ರಮಗಳಿಂದ ಸಾಕಷ್ಟು ಆಸ್ತಿಯನ್ನು ಸಂಪಾದಿಸಿದ್ದ. ಆಶೆಗಳು ಕೈಗೂಡಿದಂತೆಲ್ಲ ವಿನಯವಂತನಾಗಿ, ದಾನಶೀಲನಾಗಿ ಮೆರೆದ ಆದರ್ಶ ವ್ಯಕ್ತಿ. ತಾನು ಜನ್ಮ ಕೊಟ್ಟ ಮಗನಿಂದಲೇ ಮನೆಯಿಂದ ಹೊರದೂಡಲ್ಪಟ್ಟ ನಂತರ ಜೀವನವನ್ನೇ ಕೊನೆಗಾಣಿಸಿಕೊಂಡ ನತದೃಷ್ಟ. ಅಂತಹ ತ್ಯಾಗಜೀವಿಯೊಬ್ಬನ ದುರಂತ ಕಥೆ ಈ ಸೂರ್ಯಾಸ್ತಮ ಕಾದಂಬರಿ.

About the Author

ಡಿ ಎನ್. ಕೃಷ್ಣಮೂರ್ತಿ
(04 June 1963)

ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ  ಇವರು  ಡಿಎನ್ಕೆ ಎಂದೇ ಪರಿಚಿತರು.  ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...

READ MORE

Related Books