ಜ್ಞಾನದ ಒಂದು ಅಂಶ ವಿಜ್ಞಾನ, ವೈಜ್ಞಾನಿಕ ವಿಷಯಗಳನ್ನು ಆಧ್ಯಾತ್ಮಿಕ ತಳಹದಿಯಲ್ಲಿ ನೊಡುವುದರ ಜೊತೆಗೆ ಪುರಾಣ ಮತ್ತು ಇತಿಹಾಸದ ಸಂಗತಿಗಳನ್ನು ಕಲ್ಪನೆ ಚೌಕಟ್ಟಿನಲ್ಲಿ ಲೇಖಕರು ಕಟ್ಟಿ ಕೊಟ್ಟಿದ್ದಾರೆ. ಈ ಕಾದಂಬರಿಯಲ್ಲಿ ಕುಂಭಕರ್ಣನ ನಿದ್ರೆ ಗಿಂತಲೂ ಮೀರಿಸಿದ ನಿದ್ರೆಯ ವರ ಪಡೆದ ‘ಮುಚುಕುಂದ’ನ ಕಥೆ ಇದೆ ಇನ್ನು ಏನುಂಟು ಏನಿಲ್ಲ ತಿಳಿಯಲು ನೀವೇ ಓದಿ.
ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್ ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು. ...
READ MORE