‘ದೇವನ ಇನ್ನೊಂದು ಬಾಗಿಲು’ ಸತ್ಯಕಾಮರ ಕಾದಂಬರಿ. ಈ ಕೃತಿಯಲ್ಲಿ ಸತ್ಯಕಾಮ ಅವರು ತಂತ್ರ, ತಂತ್ರಜ್ಞಾನ, ವಿಜ್ಞಾನ ಭೈರವ, ಶಕ್ತಿ ಪಾತ, ಯೋಗ, ಆಸನ , ಸಿದ್ಧಿ, ಸಿದ್ಧಾಂತ, ಆವೇಶ-ಪ್ರವೇಶ ವ ಪರಾಕಾಯ ಪ್ರವೇಶ, ಖೇಚರಿ ವಿದ್ಯೆ, ಪ್ರಾಣಾಯಾಮ, ಶರೀರ ಸಿದ್ಧಿ, ಪವಾಡ, ಶರಣಾಗತಿ, ತಪಸ್ಸು, ವ್ರತ ವರದಾನಗಳು ಹೀಗೆ ಹತ್ತು ಹಲವಾರು ಅಗೋಚರ ಅಜ್ಞಾತ ವಿಷಯಗಳನ್ನು ಚರ್ಚಿಸಿದ್ದಾರೆ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE