ಕಾಲಚಕ್ರ ಕಾದಂಬರಿ ಪ್ರಾರಂಭ ಆಗೋದು ವೃದ್ಧ ಮತ್ತು ವೃದ್ಧೆಯರ ಆತ್ಮಗಳ ಪಿಸು ಮಾತಿನಿಂದ ಸಮಾಜ ನಮ್ಮನ್ನ ಒಂದಾಗಿ ಬದುಕಲು ಬಿಡಲಿಲ್ಲ ಈಗಲಾದರು ಒಟ್ಟಿಗೆ ಇರಬಹುದೆಂಬ ಮಾತಿನಿಂದ. ಈ ಕಾದಂಬರಿಯ ಕಥಾನಾಯಕನ ಜೀವನದ ಕುರಿತಾದ ವಿಚಾರ ಹೇಳುತ್ತಾ ಹೋಗುತ್ತದೆ. ನಾಯಕನ ಬಡತನ ಬದುಕಿನ ವಿವರ ದುಡಿಮೆ ಜವಾಬ್ದಾರಿಯುತ ಹೊಣೆಗಾರಿಕೆ, ಅದರಲ್ಲಿ ಶಿಕ್ಷಣ ಪಡೆಯಬೇಕೆಂಬ ಮಹತ್ವಾಕಾಂಕ್ಷೆ. ಪಿ.ಜಿ ಯಲ್ಲಿ ಹುಟ್ಟಿದ ಮೋದಲ ಪ್ರೀತಿ ಕೊನೆಯ ಉಸಿರಿರುವ ತನಕ ಎದೆಯಲ್ಲಿ ಗೂಡು ಕಟ್ಟುವ ಮೂಲಕ, ಬದುಕಿನ ಜಂಜಾಟದ ಮಧ್ಯೆ ಅನೇಕ ವಿಘ್ನ ಬಂದು ಪ್ರೀತಿ ದೂರವಾದದ್ದು. ಕಥಾನಾಯಕನ ಮತ್ತು ನಾಯಕಿ ಬಾಳಲ್ಲಿ ಮದುವೆ ಮಕ್ಕಳಾಗಿ ಬದುಕಿನ ಬವಣೆ ಎಳೆದು 60 ವರ್ಷದ ವಯಸ್ಸಿನಲಿ ಮತ್ತೆ ಭೇಟಿಯಾದ ಅವರ ನಿಷಕಲ್ಮಶ ಪ್ರೀತಿಯ ಮತ್ತೆ ಚಿಗುರೊಡೆಯುತ್ತದೆ. ಇಳಿ ವಯಸ್ಸಿನಲ್ಲಿ ಒಬ್ಬರಿಗೆ ಒಬ್ಬರು ತಮ್ಮ ಭಾವನೆಗಳು ಹಂಚಿಕೊಳ್ಳುವ ಸಖ ದುಃಖ ಹೇಳಿಕೊಳ್ಳುವ ಅವಕಾಶ ಇಬ್ಬರಿಗೆ ಸಿಕ್ಕಾಗ ಅದಕ್ಕೂ ಸಮಾಜ ಅಡಿ ಮಾಡುವ ಕಥೆ ಇದಾಗಿದೆ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE