ಕುಂಜಾಲು ಕಣಿವೆಯ ಕೆಂಪು ಹೂವು

Author : ನಾ. ಡಿಸೋಜ

Pages 116

₹ 80.00




Year of Publication: 2010
Published by: ರವೀಂದ್ರ ಪುಸ್ತಕಾಲಯ
Address: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ, ಶಿವಮೊಗ್ಗ ಜಿಲ್ಲೆ
Phone: 8183228616

Synopsys

ಮನುಷ್ಯನ ಎಲ್ಲ ಅನುಭವ ಸಾಕ್ಷಾತ್ಕಾರವಾಗುತ್ತದೆಯೇ? ನಿನ್ನೆ ಹಾಗೂ ವರ್ತಮಾದಲ್ಲಿ ನಡೆವುದಕ್ಕೂ ವ್ಯತ್ಯಾಸವಿಲ್ಲವೇ? ನಡೆದ ಹೆಜ್ಜೆಯ ಗುರುತು ಈಗಲೂ ಹಾಗೇ ಇರಬಹುದೇ? ಅಥವಾ ಪಥ ಬದಲಿಸಿದವಾ? ಬದಲಾವಣೆ ಜಗದ ನಿಯಮ ಎಂದು ಹೇಳುವುದಾದರೆ ಈ ಪ್ರಶ್ನೆಗಳಿಗಿಲ್ಲಿ ಅರ್ಥವೇ ಇರುವುದಿಲ್ಲ. ಇದರ ಸೂಕ್ಷ್ಮ ಸಂಬಂಧ ಎಳೆ ಈ ಕಾದಂಬರಿಯಲ್ಲಿ ಸಿಗುತ್ತದೆ.

ಕಥಾನಾಯಕ ತನ್ನ ಕಚೇರಿಯ ಪೀಕಲಾಟದಿಂದ ಬೇಸತ್ತು ನೆಮ್ಮದಿಗಾಗಿ ಅರಸುತ್ತಿರುತ್ತಾನೆ. ಆಗ ತನ್ನ ಸಹೋದ್ಯೋಗಿ ಕೊಡುವ ಸಲಹೆ ಸ್ವೀಕರಿಸಿ, ಒಂದು ತಿಂಗಳ ಮಟ್ಟಿಗೆ ರಜೆ ಪಡೆದು, ಹೆಂಡತಿ ಮಕ್ಕಳನ್ನು ಒಪ್ಪಿಸಿ ತನ್ನ ಹುಟ್ಟೂರಿಗೆ ಮರಳುತ್ತಾನೆ. ಕಥಾನಾಯಕ ಅಲ್ಲಿಗೆ ಹೋದಾಗ ತನ್ನ ತಂದೆ ಬರೆದಿಟ್ಟಿದ್ದ ಕುಂಜಾಲು ಕಣಿವೆಗೆ ಹಿಂದೆ ಹೋಗಿ ಬಂದದ್ದರ ಅನುಭವ ವಿವರಿಸಿದ್ದ ಡೈರಿಯನ್ನು ತನ್ನ ತಾಯಿಯಿಂದ ಪಡೆದ ನಂತರ ಅವನ ಯಾತ್ರೆ ಆರಂಭಗೊಳ್ಳುತ್ತದೆ.

ಆ ಯಾತ್ರೆಯಲ್ಲಿ ಎರಡು ಬೆಟ್ಟಗಳ ಬುಡದಿಂದ ಕಣಿವೆ ಶುರುವಾಗಲಿತ್ತೋ ಅಲ್ಲಿ ಗಣಿ ಕೆಲಸ, ನದಿಗೆ ಸೇತುವೆ ಕಟ್ಟಿ ನೀರನ್ನು ಸಂಗ್ರಹಿಸಿ ವಿದ್ಯುತ್ ತೆಗೆಯುವ ಕಾಮಗಾರಿ ನಡೆಯುತ್ತಿರುತ್ತದೆ. ಬದಲಾದ ಈ ಆಘಾತಕಾರಿ ಸನ್ನಿವೇಶಗಳ ಚಿತ್ರಣವೇ ಕಾದಂಬರಿಯ ಕಥಾವಸ್ತು.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books