`ಕಲ್ಲು ನೆಲದ ಹಾಡುಪಾಡು’ ಜೆ.ಎಂ. ಕಟ್ ಸೆ ಅವರ ಮೂಲ ಕಾದಂಬರಿಯಾಗಿದ್ದು, ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿ ದಕ್ಷಿಣ ಆಫ್ರಿಕಾದ ಒಣಬಯಲಿನಲ್ಲಿ ನೆಲೆಸಿದ, ಆಫ್ರಿಕಾನ್ಸ್ ಭಾಷೆ ಮಾತನಾಡುವ ಕುರಿಗಾಹಿ ಸಮುದಾಯಕ್ಕೆ ಸೇರಿದ ಒಂಟಿ ಹೆಣ್ಣಿನ ಆತ್ಮಕಥೆಯಂತೆ ಭಾಸವಾದರೂ ಎಲ್ಲ ಕಾಲದ ಎಲ್ಲ ಸಂದರ್ಭದ ಪಿತೃಪ್ರಧಾನ ಸಮಾಜಗಳ ಕ್ರೌರ್ಯ- ದಮನಗಳ ಕಲ್ಲುನೆಲದಲ್ಲಿ ಮುರುಟಿಹೋಗುವ ಹೆಣ್ಣುಜೀವಗಳ, ಅಂತೆಯೇ ವರ್ಣಭೇದ ನೀತಿಯ ನೊಗದ ಕೆಳಗೆ ನಲುಗುವ ಕಪ್ಪುಜನರ ಅಸ್ತಿತ್ವಗಳ ಒಳಗು- ಹೊರಗುಗಳಿಗೆ ಕಲೆಯ ಕನ್ನಡಿ ಹಿಡಿಯುತ್ತದೆ. ಮ್ಯಾಗ್ತಾ, ತನ್ನದೇ ಆದ ಆಕೃತಿಗಳನ್ನು ಭಾಷೆಯನ್ನು, ಪ್ರತಿಮೆಗಳನ್ನು ಕಟ್ಟಿಕೊಳ್ಳುತ್ತಾ, ಅದರ ಜೊತೆಜೊತೆಗೇ ಛಿದ್ರವಾಗಿ ಹುಚ್ಚಿಯಾಗುವ ಬಗೆಯು ವ್ಯಕ್ತಿತ್ವದ ವಿಘಟನೆಗೆ ಒಡ್ಡಿದ ರೂಪಕವಾಗುತ್ತದೆ. ಕಾದಂಬರಿ ವಾಸ್ತವವನ್ನು ಕಟ್ಟುವ, ಕೆಡಿಸುವ, ಸಂದಿಗ್ಧವಾಗಿಸುವ ವಿಧಾನ ಕೂಡ ಹೆಣ್ಣಿಗೆ ಸಹಜವಾದ ತಿಳಿವಳಿಕೆಯನ್ನು ಗಂಡಿನ ತರ್ಕಪ್ರಧಾನ ಚಿಂತನೆಗೆ ಮುಖಾಮುಖಿಯಾಗಿಸುತ್ತದೆ.
ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...
READ MORE