‘ಬದುಕು’ ಗೀತಾ ನಾಗಭೂಷಣ ಅವರ ಕಾದಂಬರಿಯಾಗಿದೆ. ವೈಭವೋಪೇತವಾದ ಜೀವನವನ್ನು ಇನ್ನಷ್ಟು ಹಿಗ್ಗಿಸಿ ಸಾಹಿತ್ಯ ರಚಿಸುವ ಲೇಖಕರ ಮಧ್ಯೆ ಶ್ರೀಮತಿ ಗೀತಾ ನಾಗಭೂಷಣ ಕೆಳವರ್ಗದ ನಿರ್ಗತಿಕರ ಬದುಕಿನ ದಾರುಣ ಬದುಕನ್ನು ಇದ್ದಂತೆಯೇ ದಾಖಲಿಸುತ್ತ, ಅದರ ನೋವುಗಳನ್ನು ಮಾನವೀಯತೆಯಿಂದ ಸಹಾನುಭೂತಿಯಿಂದ ತಿಳಿಸುವ ವಿಶಿಷ್ಟ ಲೇಖಕಿ. ಮನುಷ್ಯ ಸಂಬಂಧಗಳನ್ನು ಮಾತ್ರ ಮಾನವೀಯ ನೆಲೆಯಿಂದ ಹುಡುಕಾಡಿ ಹೆಣೆದ ಈ ಕಾದಂಬರಿಯಲ್ಲಿ ಶೋಷಿತ ಜನರ ಬದುಕಿನ ಎಷ್ಟೋ ಮುಖಗಳು ಕಾಣಸಿಗುತ್ತವೆ. ಅವಕ್ಕೆ ಕೊನೆಯಿರುವುದಿಲ್ಲ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE