“ಹಮ್ಮಾ ಹೂ” ಶ್ರೀದೇವಿ ಕಳಸದ ಅವರ ಕಾದಂಬರಿ. ಇಲ್ಲಿ ಅವರು ಓದುಗರನ್ನು "ಹೀಗೆಯೇ ಯೋಚಿಸಿ, ಭಾವಿಸಿ" ಎಂದು ಒತ್ತಾಯಿಸದೇಯೇ, ಕತೆಯನ್ನೇ ಕೆಂದ್ರೀಕರಿಸಿ, ನಾವು ಯೋಚಿಸುವಂತೆ ಮಾಡುವ ಕಥನವನ್ನು ನೀಡಿದ್ದಾರೆ. ಸಾಮಾಜಿಕ ಕಾಳಜಿ, ಪಾಲಕರ ಚಿಂತೆ, ಮಾನವ ಮನಸ್ಸಿನ ದುರಾಸೆ, ಕ್ರೌರ್ಯ, ಒಳಗುದಿಗಳು, ಬಗ್ಗದ ಮನೋಸ್ಥೈರ್ಯ ಎಲ್ಲವೂ ಈ ಕಾದಂಬರಿಯಲ್ಲಿದೆ. ಧಾರವಾಡದ ಸುತ್ತಲಿನ ಹಳ್ಳಿಗಳ ಭಾಷಾ ಸೊಗಡು ಮನಕೆ ಮುದ ನೀಡುತ್ತದೆ. ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ಸಲೀಸಾಗಿ ಓಡಾಡುವ ಕತೆಯ ಓಟ ತಾಜಾತನವನ್ನು ಕಾಯ್ದುಕೊಂಡು ಸಾಗುತ್ತದೆ.
ಶ್ರೀದೇವಿ ಕಳಸದ ಅವರು ಲೇಖಕಿ ಹಾಗೂ ಪರ್ತಕರ್ತೆ. ತಂದೆ ಡಾ. ದೇವದಾಸ ಕಳಸದ, ತಾಯಿ-ಕೌಸಲ್ಯ ಕಳಸದ .ಜನನ 25-08-1981 ರಂದು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಿಂದೂಸ್ತಾನಿ ಸಂಗೀತ ಕಲಾವಿದೆ. ಸಂಗೀತ ಶಿಕ್ಷಕಿಯಾಗಿ ಪಾಠ ಹೇಳಿ ಕೊಡುತ್ತಾರೆ. ಭಾವಗೀತೆಗಳಿಗೆ ಸ್ವರ-ಸಂಯೋಜಿಸಿ ಹಾಡುವುದು ಹಾಗೂ ಕಾರ್ಯಕ್ರಮ ನಿರೂಪಕಿಯೂ ಹೌದು. ಚಿತ್ರಕಲೆ ಇವರ ಹವ್ಯಾಸ. ಹಿನ್ನೆಲೆ ಧ್ವನಿ, ಸ್ಕ್ರಿಪ್ಟಿಂಗ್, ಕಾನ್ಸೆಪ್ಟ್ ಕ್ರಿಯೇಷನ್, ಇಲ್ಲಸ್ಟ್ರೇಷನ್ ವಲಯದಲ್ಲಿ ಜಾಣ್ಮೆ ಇದೆ. ಹಾಡಾಗದ ಸಾಲುಗಳು -ಇವರ ಮೊದಲ ಕವನ ಸಂಕಲನ. ಮೈಸೂರು ವಿವಿಯ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯೋಜನೆಗೆ ‘ನೀರು ಹೇಳುವ ನೀರೆಯರ ಕಥೆಗಳು’ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ...
READ MORE