ಮೊಗ್ಗೊಡೆದ ಮೌನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 160

₹ 113.00




Year of Publication: 2015
Published by: ಸುಧಾ ಎಂಟರ್‌ಪ್ರೈಸಸ್‌
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560072
Phone: 98454 49811

Synopsys

ಹದಿ ಹರೆಯದ ವಯಸ್ಸಿನಲ್ಲಿ ಗಂಡು ಹೆಣ್ಣು ಪರಸ್ಪರ ಮೊದಲ ನೋಟದ ಆಕರ್ಷಣೆಗೆ ಒಳಗಾಗಿ, ಆಕರ್ಷಣೆ ನಂತರ ಸ್ನೇಹವಾಗಿ ಬದಲಾಗಿ, ಅವರ ನಡುವೆ ಪ್ರೇಮ ಅಂಕುರಿತವಾಗುತ್ತದೆ. ಮುಂದೆ ಇದು ಭಗ್ನಪ್ರೇಮವಾಗುತ್ತದೋ, ಮದುವೆಯಲ್ಲಿ ಕೊನೆಯಾಗುತ್ತದೊ ಅವರವರ ದೃಢ ಸಂಕಲ್ಪವನ್ನು ಅವಲಂಭಿಸಿರುತ್ತದೆ. ಗಾಢವಾದ, ನಿಸ್ವಾರ್ಥ ಪ್ರೇಮ. ಇಂತಹ ಪ್ರೇಮದ ಎರಡು ಮುಖಗಳನ್ನು ಒಂದೇ ಕಾದಂಬರಿಯಲ್ಲಿ ಚಿತ್ರಿಸಿ, ಕತೆಯ ಸೌಂದರ್ಯವನ್ನು “ಮೊಗ್ಗೊಡೆದ ಮೌನ” ಎಂಬ ಕೃತಿಯಲ್ಲಿ ಸಾಯಿಸುತೆ ಅವರು ಹಿಮ್ಮಡಿಗೊಳಿಸಿ ಈ ಕಾದಂಬರಿ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ.ಶ್ರೀಕಾಂತಯ್ಯ ಲೀಲಾವತಿ ದಂಪತಿಗಳ ಮಗ ಹೇಮಂತ್, ಅಪ್ಪ ಅಮ್ಮನಿಗೆ ವಿರುದ್ಧವಾಗಿ ವೈಜಯಂತಿಯನ್ನು ಎಂಬ ಶ್ರೀಮಂತ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಮನೆಗೆ ಕರೆತರುತ್ತಾನೆ. ಮುಂದೆ ಇವರ ಬದುಕಿನಲ್ಲಿ ಘಟಿಸುವ ಘಟನೆಗಳು ಅವೆಲ್ಲವನ್ನು ವಿವರವಾಗಿ ವಿವರಿಸುತ್ತಾ ಈ ಕಾದಂಬರಿಯೂ ಮುಂದೆ ಸಾಗುತ್ತದೆ. ನೆಂಟಸ್ಥಿಕೆ ಬಂದರೂ ಮದುವೆಯಾಗಲು ಒಪ್ಪದ ಸರಿತ ತಂದೆ ತಾಯಿಗೆ ಸಮಸ್ಯೆಯಾಗಿ ಪರಿಣಮಿಸುತ್ತಾಳೆ. ಹೇಮಂತ್ ತಂಗಿಯ ಮನಸ್ಸಿನ ಗುಟ್ಟನ್ನು ಹೊರಗೆ ತೆಗೆಯುತ್ತಾನೆ. ಮೂರು ವರ್ಷದ ಹಿಂದೆ ತಂದೆಯ ಬಳಿ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿಯನ್ನು ಮೊದಲ ನೋಟಕ್ಕೆ ಮೆಚ್ಚಿ ಆಕರ್ಷಣೆಗೆ ಒಳಪಟ್ಟಿರುತ್ತಾಳೆ.ಸರಿತಳ ಮನಸ್ಸಿನಲ್ಲಿ ಪ್ರತಿಷ್ಠಾಪನೆಯಾದ ಆ‌ ಮೂರ್ತಿ ಯಾರದು? ಅವನಿಗೆ ಇವಳ ಪ್ರೇಮದ ಅರಿವಿತ್ತೆ? ಅವನ ಹುಡುಕಾಟಕ್ಕಾಗಿ ಹೇಮಂತ್ ಮಾಡಿದ ಪ್ರಯತ್ನಗಳ್ಯಾವುವು? ಅವನ ಪ್ರಯತ್ನ ಸಫಲವಾಯಿತೇ? ಸರಿತಳಿಗೆ ಅವಳ ಆರಾಧ್ಯ ವ್ಯಕ್ತಿ ದೊರಕಿದನೆ? ತಾಯಿಯನ್ನು ಬಿಟ್ಟು ಬಂದ ಆಲಾಪನ ತಂದೆಯ ಮನೆಗೆ ಹೊಂದಿಕೊಂಡಳೇ? ಈ ಎಲ್ಲ ಪ್ರಶ್ನೆಗಳಿಗ ಉತ್ತರವು “ಮೊಗ್ಗೊಡೆದ ಮೌನ” ಎಂಬ ಈ ಕೃತಿಯಲ್ಲಿ ದೊರಕುತ್ತದೆ .

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...

READ MORE

Related Books