‘ರಾಜ ಕಲಾವಿದ ರವಿವರ್ಮ’ ಕೃತಿಯು ಸೀತಾರಾಮ್ ಅವರ ಕಾದಂಬರಿಯಾಗಿದೆ. ಈ ಗ್ರಂಥದಲ್ಲಿ ಅವರು 40 ವರ್ಣಚಿತ್ರಗಳನ್ನು ಕಾಣಬಹುದು. ರಾಜಕಲಾವಿದ ರವಿವರ್ಮ ಈಗಾಗಲೇ ವಾಚಕಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ವ್ಯಕ್ತಿ. ‘ರವಿವರ್ಮನಾ, ಕುಂಚದ ಕಲೆ, ಭಲೇ ಸಾಕಾರವೋ’ ಎಂಬ ಚಿತ್ರಗೀತೆಯ ಸಾರಾವನ್ನು ಹೇಳುವ ವಿಚಾರಗಳನ್ನು ನಾವು ಇಲ್ಲಿ ಗಮನಿಸಬಹುದು. ಲೇಖಕಿಯೇ ಹೇಳುವಂತೆ, ಭಾರತದ ಅಜರಾಮರ ಚಿತ್ರಕಾರ, ರಾಜರವಿವರ್ಮರ ಕುರಿತಾದ ಬರಹಗಳು ಬೆರೆಳೆಣಿಕೆಯಷ್ಟೇ, ಅದರಲ್ಲೂ ಕನ್ನಡ ಸಾಹಿತ್ಯದಲ್ಲಿ ಅವರ ಕುರಿತಾದ ವಿಚಾರಗಳು ಅತಿವಿರಳ. ಆದರೆ ನಮಗರಿವಿಲ್ಲದ ಹಲವಾರು ವಿಚಾರಗಳನ್ನು ಈ ಕೃತಿಯು ಸಫಲವಾಗಿದೆ.
ಕಾದಂಬರಿ, ನಾಟಕ, ಸಂಗೀತ, ಶಿಶು ಸಾಹಿತ್ಯ ಮುಂತದ ರಂಗಗಳಲ್ಲಿ ಕಲೆಯ ಆಸಕ್ತಿಯನ್ನು ಪ್ರದರ್ಶಿಸಿರುವ ಗೀತಾ ಸೀತಾರಾಂರವರು ಹಲವಾರು ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆದಿದ್ಧಾರೆ. ಸಿ.ಎಫ್,ಟಿ,ಆರ್,ಐ ನಲ್ಲಿ ಉಪನಿದೇರ್ಶಕರಾಗಿರುವ ಅವರು 1952 ಫೆಬ್ರವರಿ 10 ರಂದು ಜನಿಸಿದರು. ಬೇಲಿ, ಆಸರೆ, ಸಪ್ತಸ್ವರ, ನಾಕುತಂತಿ, ಉಂಗುರ, ನೆಳಲು, ಪೃಥಾ ಇವರ ಪ್ರಮುಖ ಕಾದಂಬರಿಗಳು. ಭೀಷ್ಮ, ಊರ್ಮಿಳಾ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಶಿಶು ಸಾಹಿತ್ಯವನ್ನು ರಚಿಸಿರುವ ಇವರು ಕರ್ನಾಟಕ ಸಂಗೀತ ನಡೆದು ಬಂದ ದಾರಿ, ಪುಸ್ತಕ ನಿಮಗೆಷ್ಟು ಗೊತ್ತು? ಎಂಬ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಎರಡು ಹೊಸ ರಾಗಗಳ ಕೊಡುಗೆ, ಆಕಾಶವಾಣಿಯ ಶಾಸ್ತ್ರೀಯ ಹಾಗೂ ...
READ MORE