ಮಹಿಳಾ ಪ್ರಧಾನ ವಸ್ತುವಿರುವ ಕಾದಂಬರಿ-ದೋಣಿ ನಡೆಸೋ ಹುಟ್ಟು. ಉತ್ತರಕನ್ನಡ ಹಾಗೂ ಧಾರವಾಡ ಭಾಗದಲ್ಲಿ ನಡೆಯುವ ಕಥಾ ವಸ್ತು. ಕರಾವಳಿಯ ಒಂದು ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳು ಮದುವೆಯಾಗಿ ಧಾರವಾಡ ಶಹರಕ್ಕೆ ಬಂದು ಅಲ್ಲಿ ಹೊಂದಿಕೊಳ್ಳಬೇಕಾದ ದಿನಚರಿಯ ವಿವರಗಳು , ಆಧುನಿಕತೆಗೆ ಮುಖ ಮಾಡಿರುವ ಮನಸ್ಥಿತಿಗಳ ಮಧ್ಯೆ ಹಳ್ಳಿ ಸೊಗಡಿನ ಶುದ್ಧ ಮುಗ್ಧ ಮನಸ್ಸೊಂದು ತಳಮಳಗೊಳ್ಳುವ ಬಗೆ ಹಾಗೂ ಗಂಡು ಹೆಣ್ಣಿನ ಸಂಬಂಧದಲ್ಲಿ ತಲೆ ದೋರುವ ವೈರುಧ್ಯಗಳ ಅನೇಕ ಘಟನೆಗಳನ್ನು ಕಾದಂಬರಿಗಾರ್ತಿ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ.
ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...
READ MORE