ಲೇಖಕಿ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ- ಚಂದ್ರಗಿರಿಯ ತೀರದಲ್ಲಿ. ಈ ಕಾದಂಬರಿ ಪ್ರಕಟವಾಗಿ ಈ 25 ವರ್ಷಗ ಚಂದ್ರಗಿರಿ ಮತ್ತು ನೇತ್ರಾವತಿ ನದಿಗಳ ಚಿತ್ರಣ, ಅದರೊಂದಿಗೆ ಮುಸ್ಲಿಂ ಮಹಿಳೆಯರು ಸಾಗಿಸಿದ ಬದುಕು. ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಇಲ್ಲಿ ಅರ್ಥ ನೀಡಿದ್ದಾರೆ. ಚಂದ್ರಗಿರಿ ಎಂಬುದು ಕರಾವಳಿ ಮಹಿಳೆಯರ ಸುಖ-ಸಂತೋಷ, ದುಖಃ-ದುಮ್ಮಾನಗಳಿಗೆ ಅನನ್ಯವಾದ ರೂಪಕವಾಗಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ದಾಖಲಾಗಿದೆ. ಭಾಷೆಯೂ ಸರಳವಾಗಿದೆ.
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...
READ MORE