ಲೀಖಕಿ ಎ.ಪಿ. ಮಾಲತಿ ಅವರು ಬರೆದ ಕಾದಂಬರಿ-ನೂಪುರ ಗಾನ. ನಾಟ್ಯವೇ ತನ್ನ ಜೀವನದ ಉಸಿರಾಗಿಸಿಕೊಂಡ ಕಥಾನಾಯಕಿ, ತನ್ನದೇ ಪ್ರೇಮಿಯಿಂದ ತಿರಸ್ಕೃತಳಾದಾಗ ಅವಳಲ್ಲಿ ಉಂಟಾದ ಮಾನಸಿಕ ತಳಮಳವೇ ಇಲ್ಲಿಯ ಕಥಾ ವಸ್ತು. ಪತಿಯ ಮಾತು ಕೇಳಿ ಸಂಸಾಕ್ಳಕಂಟಿಕೊಂಡು ಇರಬೇಕೋ ಇಲ್ಲವೇ ಕಲಾರಾಧನೆಯಲ್ಲಿ ಮುಂದುವರಿಯಬೇಕೋ ಎಂಬ ಸಂದಿಗ್ಧತೆಯಲ್ಲಿ ತೊಳಲಾಡುವ ಕಥಾನಾಯಕಿಯ ಮನಸ್ಥಿತಿಯನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಆಕೆಯ ತಳಮಳವು ಪುರುಷ ಪ್ರಧಾನ ಸಮಾಜದ ಆತ್ಮಾವಲೋಕನಕ್ಕೂ ಎಡೆ ಮಾಡಿಕೊಡುತ್ತದೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE