ಇಟಲಿಯಲ್ಲಿ (17ನೇ ಶತಮಾನ) ಬದುಕಿದ್ದ ವ್ಯಕ್ತಿ ಗಯಾಕೊಮೊ ಕಾಸನೋವ. ಹೆಣ್ಣನ್ನು ಆಕರ್ಷಿಸಿ, ದೈಹಿಕ ಸಂಪರ್ಕವನ್ನು ಬೆಳೆಸಿ, ಅವಳನ್ನು ಕೊಂದು ಎಸೆಯುವುದು ಅವನ ಮನಸ್ಥಿತಿ. ಅಧ್ಯಯನದ ನಂತರ ಮನಶಾಸ್ತ್ರಜ್ಞರು ಇಂತಹ ಮನಸ್ಥಿತಿಯನ್ನು ಕಾಸನೋವ ಎಂದೇ ಹೆಸರು ನೀಡಿದರು.
ಈ ಕಾದಂಬರಿಯಲ್ಲಿ, ಇಬ್ಬರು ಹುಡುಗರು- ನಚಿಕೇತ ಮತ್ತು ಚಾರುದತ್ತ ಹೇಗೆ ಕಾಸನೋವ ಮನಸ್ಥಿತಿಗೆ ಒಳಗಾಗುತ್ತಾರೆ ಎನ್ನುವುದನ್ನು ವಿವರಿಸುವ ಪ್ರಯತ್ನವಿದೆ. ಕಾಸನೋವ ಏನು ಮಾಡುತ್ತಾನೆ ಎನ್ನುವುದಕ್ಕಿಂತ ಕಾಸನೋವ ಮನಸ್ಥಿತಿ ಹೇಗೆ ಬೆಳೆಯುತ್ತದೆ ಎನ್ನುವುದು. ಅಪ್ಪ ಅಮ್ಮಂದಿರು ಮಕ್ಕಳನ್ನು ಯಾಕೆ ಗಮನಿಸಬೇಕು ಎನ್ನುವುದಕ್ಕೂ ಇಲ್ಲಿ ಉತ್ತರವಿದೆ. ಹೆಣ್ಣನ್ನು ಧನಾತ್ಮಕ ಇಲ್ಲವೇ ನಕಾರಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿಯ ಸ್ವರೂಪವೂ ಇಲ್ಲಿ ಕಾಣಬಹುದು.
ದೇವೀಪುತ್ರನ್ ಕಾವ್ಯನಾಮದಿಂದ ಬರೆಯುವ ಮನೋಜ್ ಪಿ. ಎಂ. ಅವರು ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಬಿ.ಎಡ್. ಪದವೀಧರ ಆಗಿರುವ ಮನೋಜ್ ಅವರು ಹುಟ್ಟಿದ್ದು ಕೊಡಗಿನ ವಿರಾಜಪೇಟೆಯಲ್ಲಿ. ಸದ್ಯ ಮೈಸೂರು ನಗರದ ನಿವಾಸಿ. ...
READ MORE